Bhasaka
← Back to home

ಹಿಂಗದೆ ಮನದಣಿಯ ರಂಗನ ಭಜಿಸೊ

Author: ಕನಕದಾಸCategory: ಶ್ರೀಕೃಷ್ಣRaaga: ಪರಜ್Taala: ಛಾಪುತಾಳ
ಹಿಂಗದೆ ಮನದಣಿಯ ರಂಗನ ಭಜಿಸೊ ||ಪ|| ರಂಗನ ಭಜಿಸೊ ಕೃಷ್ಣನ ಭಜಿಸೊ ||ಅ|| ಯಾತಕೆ ಸುಮ್ಮನಿರುವೆ ಪಾತಕ ಹೆಚ್ಚಿ ಮೆರೆವೆ ನೀತಿಯ ತಪ್ಪಿ ನೀನಿರುವೆ ಭೂತಳ ಭೋಗ ಸ್ಥಿರವೆ ||1|| ಗೆಜ್ಜೆಯ ಕಟ್ಟಿ ಆಡೊ ಲಜ್ಜೆಯ ಬಿಟ್ಟು ಪಾಡೊ ಮುಜ್ಜಗನ ಕೊಂಡಾಡೊ ಸಜ್ಜನರ ಜೊತೆಗೂಡೊ ||2|| ಪನ್ನಗರಾಜಶಯನನ ಪನ್ನಗಭೂಷಣ ನುತನ ಉನ್ನಂತ ಗುಣದವನ ಚೆನ್ನಾದಿಕೇಶವನ ||3||

Thoughts & Reflections

0

No reflections shared yet. Be the first to share your thoughts!

Share your thought