Bhasaka
← Back to home

ಹೇಗಿದ್ದು ಹೇಗಾದೆಯೊ ಆತ್ಮ

Author: ಕನಕದಾಸCategory: ವೈರಾಗ್ಯRaaga: ಮುಖಾರಿTaala: ಝಂಪೆತಾಳ
ಹೇಗಿದ್ದು ಹೇಗಾದೆಯೊ ಆತ್ಮ ಯೋಗೀಶನಾನಂದಪುರದಲಿರುವುದ ಬಿಟ್ಟು ||ಪ|| ಬಸಿರ ಹಳ್ಳಿಗೆ ಬಂದು ಮಾಸನೂರಲಿ ನಿಂದು ಕುಸುಕಾಡಿ ನುಡಿದು ನೆಲಬಟ್ಟೆವಿಡಿದು ಕಿಸುಕದರಿವೆಯ ಪೊದ್ದು ಮಲಮೂತ್ರದಲಿ ಬಿದ್ದು ವಸುಧೆಯಲಿ ದಿನಗಳೆದೆಯಲ್ಲ ಆತ್ಮ ||1|| ಎಳೆಗೆರೆಯಲಿ ಆಡಿ ಯೌವನದೂರಿಗೆ ಬಂದು ಥಳಥಳಿಪ ಅಸ್ತಾದ್ರಿ ನೆಳಲ ಸೇರಿ ಅಳಲು ಸುತ ಬೆಳೆದು ದಾರಿದ್ಯ್ರ ಪೇಟೆಗೆ ಬಂದು ಹಳೆಯ ಬೀಡಿಗೆ ಪಯಣವೇ ಆತ್ಮ ||2|| ಗನ್ನಗತಕದ ಮಾತು ಇನ್ನು ನಿನಗೇತಕೋ ಮುನ್ನ ಮಾಡಿದ ಕರ್ಮಭರದೊಡಲಿದೆ ಉನ್ನತದ ಕಾಗಿನೆಲೆಯಾದಿಕೇಶವ ಸುಪ್ರ ಸನ್ನ ಮೂರುತಿಯ ಭಜಿಸೆಲೊ ಆತ್ಮ ||3||

Thoughts & Reflections

0

No reflections shared yet. Be the first to share your thoughts!

Share your thought