Bhasaka
← Back to home

ಅಂತರಂಗದ ಕದವು ತೆರೆಯಿತಿಂದು

Author: ವಿಜಯದಾಸCategory: ಶ್ರೀಕೃಷ್ಣ
ಅಂತರಂಗದ ಕದವು ತೆರೆಯಿತಿಂದು ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ಏಸುದಿನವಾಯಿತೊ ಬೀಗಮುದ್ರೆಯ ಮಾಡಿ | ವಾಸವಾಗಿದ್ದರೋ ದುರುಳರಿಲ್ಲಿ || ಮೋಸವಾಯಿತು ಇಂದಿನ ತನಕ ತಮಸಿನ | ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ||1|| ಹರಿಕರುಣವೆಂಬಂಥ ಕೀಲಿ ಕೈ ದೊರಕಿತು | ಗುರುಕರುಣವೆಂಬಂಥ ಶಕ್ತಿಯಿಂದ || ಪರಮ ಭಾಗವತರ ಸಹವಾಸದಲಿ ಪೋಗಿ | ಹರಿ ಸ್ಮರಣೆಯಿಂದಲ್ಲಿ ಬೀಗಮುದ್ರೆಯ ತೆಗೆದೆ ||2|| ಸುತ್ತಲಿದ್ದವರೆಲ್ಲ ಪಲಾಯನವಾದರು | ಭಕ್ತಿಕಕ್ಕಡವೆಂಬ ಜ್ಞಾನದೀಪ || ಜತ್ತಾಗಿ ಹಿಡಿಕೊಂಡು ದ್ವಾರದೊಳಗೆ ಪೊಕ್ಕೆ | ಎತ್ತನೋಡಿದರತ್ತ ಶೃಂಗಾರಸದನ ||3|| ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು | ಪರ ದಾರಿಗೆ ಪ್ರಾಣ ಜಯವಿಜಯರು || ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ | ಸರಸಿಜನಾಭನ ಅರಮನೆಯ ಸೊಬಗು|| 4|| ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದೈಕ | ರಮೆಧರೆಯರಿಂದಲಾಲಿಂಗಿತ್ವದಿ || ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯ- | ಕಮಲದೊಳಗಿರುವ ಶ್ರೀ ವಿಜಯವಿಠ್ಠಲನ ಕಂಡೆ ||5||

Thoughts & Reflections

0

No reflections shared yet. Be the first to share your thoughts!

Share your thought