Bhasaka
← Back to home

ಅಣ್ಣನ ತೋರಿಸೆ ಎನಗೆ

Author: ವಿಜಯದಾಸCategory: ಶ್ರೀಕೃಷ್ಣ
ಅಣ್ಣನ ತೋರಿಸೆ ಎನಗೆ | ತನ್ನ ಮನೆಯಲ್ಲಿ ಬಣ್ಣದ ಭೊಗರಿ ಚಂಡು ಯಿಲ್ಲಾ | ಸುಣ್ಣದ ಗಡಿಗೆ ಯಾಕೆ ವಡಿಯಿತು ಪ ಹಾಸಿಕೆ ಹಾಸಿಕೆ ಎತ್ತ | ಕಾಸೆ ಬಿಸಿ ನೀರು | ದಾಸನ ಕರಿಯೆ | ಮೋರಿ ತೊಳಿಯೆ | ಈಸು ಸೊಲ್ಲು ಕೇಳೆ ಗೋಪಿ ||1|| ಕುಪ್ಪಸ ಕೊಡಬೇಡ ನೀ | ಅಪ್ಪನ ನೋಡ ಬೇಡ | ಚಪ್ಪರದೊಳಗೆ ಕುಳಿತು ಕಾಳು | ಕುಪ್ಪೆ ನಾಡುವ ಈಗ ಪೋಗಿ ||2|| ಹೊತ್ತು ಹೋಯಿತು ಮಸರುಕಟಿಯಲಿಲ್ಲ್ಯಾಕೆ | ಹತ್ತಿವೆ ಯಾಯಿತು ವೊತಯನೆ ಯಿಂದ | ಬಿತಿ ಬಿತಿ ಬೂವಾ ಉಂದೇನು ತುತ್ತು ||3|| ಅನ್ನಯ್ಯಾ ಬಂದ ತಾರೆ ತನ್ನ ತಲಗೀಯ | ನಿನ್ನೆ ಮಾಡಿದ ವಬ್ಬತು ಕೊದು ಎನ್ನ ಬಟ್ಟಲೊಳಗೆ ಹಾಕ ||4|| ಹೊಲಗೆ ಅನ್ನಯ್ಯ ಬಿದ್ದಾನೆ ತಲಿಯಲ್ಲೆ ಮನ್ನು | ಶಲಗಿಲಿ ವಲಿಗಿಸುವೇಗ ಬಂದು ತೊಲಿಯೆ ಬಿಸಿ ನೀರಿಂದ ಕೆತರು ||5|| ಕೆಲಿಗೆ ಹೋದೆನು ಕುಂತಿ ತಾಲೆ ಗೋಪಮ್ಮ | ಕಾಲಿಗೆ ಪಾಪೋತು ಆ ಮೆತ್ತನೆ ವಾಲೆಕಂತ ಕೈಯಲಿ ಹಿದಿಸೊ||6|| ತೊದಲ ಮಾತಾ ಕೇಳಿ ಮಗನ ವದನ ಮುದ್ದಾ | ಸದಮಲ ಭಾಗ್ಯ ವಿಜಯವಿಠ್ಠಲ | ಯದುಕುಲ ಪಾವನ ವೆಂದಳು ಗೋಪಿ||7||

Thoughts & Reflections

0

No reflections shared yet. Be the first to share your thoughts!

Share your thought