Bhasaka
← Back to home

ಅನಂತಗಿರಿ ಯಾತ್ರೆ ಮಾಡಿ

Author: ವಿಜಯದಾಸCategory: ಶ್ರೀನರಸಿಂಹ
ಅನಂತಗಿರಿ ಯಾತ್ರೆ ಮಾಡಿ ಜನರು ಅನಂತ ಜನುಮದ ಪಾಪ ಸಂಹರವು ಇಲ್ಲಿ ಕುರುರಾಯ ಜನ್ಮಾಂತರದು ಪಾಪ ನಿಲ್ಲದೆ ಮಾಡಿದಾ ನಡತಿಯಿಂದಾ ಎಲ್ಲ ಕಾಲದಲಿ ದರಿದ್ರನಾಗಿದ್ದು ಶ್ರೀ ವಲ್ಲಭನ ಒಲಿಸಿ ಮುದಂಬರೀಷ ನೃಪನಾದಾ ||1|| ಚಂಡಶಾಸನನೆಂಬ ನೃಪತಿ ದುರ್ಮತಿಯಲಿ ಮಂಡಲದೊಳಗಿರಲು ಸರ್ಪ ಕಚ್ಚಿ ಕಂಡು ಗೃಧ್ರವು ಅವನ ಉಂಗುಷ್ಟ ಭವನಾಶಿ ಕುಂಡದಲಿ ಬಿಸುಡೆ ದಶರಥ ಭೂಪತಿಯಾದಾ||2|| ಹೇಳಲಳವೆ ಇನ್ನು ಈ ಕ್ಷೇತ್ರದ ಮಹಿಮೆ ಕೇಳಿದಾಕ್ಷಣ ಮುಕ್ತಿ ಸಿದ್ಧವಕ್ಕೂ ಶ್ರೀಲೋಲ ನರಸಿಂಹ ವಿಜಯವಿಠ್ಠಲರೇಯೇನ ವಾಲಗವ ಕೈಕೊಂಡ ಮನುಜಂಗೆ ಬಲು ಸಾಧ್ಯ ||3||

Thoughts & Reflections

0

No reflections shared yet. Be the first to share your thoughts!

Share your thought