Bhasaka
← Back to home

ಅರಿವರಿಗಿಲ್ಲೆ ಹರಿಪುರವೊ | ಹರದಾರಿ

Author: ವಿಜಯದಾಸCategory: ಶ್ರೀಕೃಷ್ಣ
ಅರಿವರಿಗಿಲ್ಲೆ ಹರಿಪುರವೊ | ಹರದಾರಿ ಕೂಗಳತಿ ಎಂಬೊ ಸಂಶಯಸಲ್ಲಾಪ ಸಮಚಿತ್ತದಲ್ಲಿ ಇದ್ದು | ಸಮ ವಿಷಮ ತಿಳಿದೆದ್ದು | ಕುಮತ ಮತವನು ವದ್ದು | ಬಲು ಉಬ್ಬೆದ್ದು | ಕಮಲ ಪೀಠನ ಹೊದ್ದು | ಕ್ರಮಣಿ ಯೋಪಾದಿಯಲಿದ್ದು | ತಮಕ್ಕೆ ಹರಿನಾಮ ಮದ್ದು | ಶ್ರಮ ಕಳುಕದವಗೆ||1|| ಭಾಗವತರ ನೋಡಿ | ವೇಗ ಮನಸನು ಮಾಡಿ | ಬಾಗಿ ಸಿರವನೆ ನೀಡಿ | ನಲಿದು ಪಾಡಿ | ಯೋಗವಾಗದೆ ಕೂಡಿ | ಭೋಗವನು ಈಡಾಡಿ | ತೂಗಿ ಮೈಯಲಾಡಿ ಪುಣ್ಯದನವನಿಗೆ ||2|| ಹರಿ ಭಕುತಿಯ ಬೇಕು | ನರಹರಿಯ ಸ್ಮರಣೆ ಬೇಕು | ಹರಿಕಥಾ ಬೇಕು | ಹರಿ ಎನಲಿ ಬೇಕು | ಹರಿಯ ಭಜಿಸಲಿ ಬೇಕು | ಹರಿವೊಲಿಮೆ ಇರಬೇಕು | ಹರಿಯಲ್ಲದಿಲ್ಲೆಂದು ಹರಿದು ನುಡಿದವನಿಗೆ ||3|| ಆಸಿಯನು ಕಳೆದು | ದುರ್ವಾಸನೆ ಹಮ್ಮು ಕಳೆದು | ಕ್ಲೇಶವನು ಅಳಿದು | ತೋಷದಲಿ ಬೆಳೆದು | ದೋಷರಾಶಿಗೆ ಮುಳಿದು | ದೂಷಕರನೆ ಅಳಿದು | ಭೇಷಜವನೆ ಅಳಿದು | ದಾಸರ ಬಳಿಗೆ ಸುಳಿದವಗೆ ||4|| ಆಚಾರವನು ಪಿಡಿದು | ಸೂಚನೆ ಅರಿತು ನಡೆದು | ವಾಚಗಳ ಮಿತಿ ನುಡಿದು | ನಾಮಗುಡಿದು | ನಾಚಿಕೆಯ ತೊರೆದು | ಸಿರಿ ವಿಜಯವಿಠ್ಠಲರೇಯನ | ಯೋಚನಿಂದಲಿ ಬಿಡದೆ | ದಿನವ ಹಾಕುವನಿಗೆ||5||

Thoughts & Reflections

0

No reflections shared yet. Be the first to share your thoughts!

Share your thought