Bhasaka
← Back to home

ಅರ್ಚನೆ ಬಗೆ ಕೇಳಿ ಲೋಕ

Author: ವಿಜಯದಾಸCategory: ಶ್ರೀಕೃಷ್ಣ
ಅರ್ಚನೆ ಬಗೆ ಕೇಳಿ ಲೋಕ ಕಣ್ಣು ಮುಚ್ಚಿ ಕುಳಿತರೆ ಕೊಡ ಹರಿ ಮುಕ್ತಿಲೋಕಾ ಜಡವ ಪೂಜಿಸಿದರಲ್ಲೇನೊ ತಾನು | ಜಡ ತುಲ್ಯ | ನಾಗಿದ್ದಕೆ ಸಮವೇನು || ಕೆಡದಿರು ಇದರೊಳಗೆ ನೀನು ತಿಳಿ | ಒಡನೆ ಕರ್ಮಗಳೆಲ್ಲೇನುಂಟು ಕಾಣೋ ||1|| ಏಕಾಂತದಲಿ ನಿನ್ನ ಮನಸು ಅ | ನೇಕವಾಗುವುದು ನಿರಂತರ ಗುಣಿಸು || ನೀ ಕೇಳು ಯೋಚಿಸಿ ಗಣಿಸು | ಸರ್ವ ಆಕಾರದಲ್ಲಿ ಶ್ರೀ ಹರಿಯನ್ನೆ ನೆನಸು ||2|| ತ್ರಿವಿಧ ಜೀವರು ಮಾಡುವಂಥ ನಡತಿ | ಹವಣವ ನೋಡಿದು ಬಿಡು ನಿನ್ನ ಪಂಥ || ಕವಿಗಳೊಡನೆ ಸುಪಂಥದಿಂದ | ಪವಮಾನಮತ ಪೊಂದಿ ಭಜಿಪುದು ಇಂಥ ||3|| ದ್ಯುಣುಕ ಪಿಡಿದು ಬಹುಕಾಲತನಕ | ಎಣಿಕೆ ಮಾಡುತಲಿರು ನಿತ್ಯ ಸುಶೀಲ || ಗುಣವಂತನಾಗೊ ನೀ ಬಹುಳ ಸುಖ- | ವನಧಿ ರಂಗನ ವ್ಯಾಪಾರವೆನ್ನೊ ಬಾಲ ||4|| ಆವಾಗ ಮರೆಯದಿರು ಹರಿಯ ಕಂಡ | ಠಾವಿನಲಿ ಯೋಚಿಸು ಅರಗಳಿಗೆ ಬಯಸದಿರು ಸಿರಿಯ || ದೇವ ವಿಜಯವಿಠ್ಠಲ ದೊರೆಯ ನಿನ್ನ ಭಾವದಲಿ ತಿಳಿಯೊ ಆತನ ಚರಿಯಾ ||5||

Thoughts & Reflections

0

No reflections shared yet. Be the first to share your thoughts!

Share your thought