Bhasaka
← Back to home

ಆಂಜನೇಯಾ ಕುಂತಿತನಯಾ

Author: ವಿಜಯದಾಸCategory: ಶ್ರೀಹನುಮಂತ
ಆಂಜನೇಯಾ ಕುಂತಿತನಯಾ | ಕಂಜಲೋಚನ ಪ್ರಿಯಾ | ಮಧ್ವಾಖ್ಯರಾಯಾ | ಸಂಜೀವಧರಣ ಧನಂಜಯ ಪೂರ್ವಜ | ಅಂಜದ ದುರ್ವಾದಿ ಭಂಜ ಪೂಭಂಜನ ಯಾಗಾಭಿಮಾನಿಗಳನು | ಯೋಗದಿಂದಲಿ ಪಡೆದಾ | ಆಗಮತತಿ ವಂದ್ಯ ಅನಿಂದ್ಯಾ | ಭಾಗತ್ರಯದಲ್ಲಿ ವಿ | ಭಾಊ ಮಾಡಲು ಅಂದು | ನಾಗಭೂಷಣನ ಪೆತ್ತಾಸೆ ಚಿತ್ತ | ಭಾಗವೆ ನಿನ್ನ ವೈ | ಭೋಗದ ಚರಣಕೆ | ಸಾಗರ ಹಾರಿದ ಹೇ ಗುಣಪೂರ್ಣನೆ | ರಾಗ ಭಕುತಿಯಿಂದ ಭೋಗದೊಳಗೆ ಮೇಲು | ಬಾಗಿಲ ಸಾರುವ ವೇಗವನೀಯೋ ||1|| ನಿತ್ಯ ಪ್ರವಾಸ ರೂಪಾ | ವ್ಯಕ್ತಿ ಜ್ಞಾನ ಪ್ರತಾಪಾ | ಸತ್ಯಮೂರ್ತಿ ಈ ವಾರ್ತಿ | ಸುತ್ತು ತುಂಬಿದೆ ಕೀರ್ತಿ ಇತ್ತು ಸಂತತಾ | ಸ್ಛೂರ್ತಿ ಕಿತ್ತಿ ಬಿಸಾಟು ಪಂಕಾ | ನಿಷ್ಕಲಂಕಾ | ಹೊತ್ತು ಹೊತ್ತಿಗೆ ನಿನ್ನ ತುತ್ತಿಸುವೆನೊ ರಿಪುಬಲ | ಕತ್ತರಿಸಿದಿ ಭೀಮಾ | ಚಿತ್ತದೊಳಗೆ ಹರಿ | ಉತ್ತಮತರ ತಮ ಉತ್ತಮನೆಂಬೋದೀ ಉತ್ತರ ಬರಲಿ||2|| ಪರಿಪರಿ ಸಾಮಥ್ರ್ಯ ದುರುಳ ಸಮೂಹವೆಂಬೋ | ಸ್ಮರನಾ ನಿನ್ನಯ ಮೈಗೆ ಈ ಕೈಗೆ | ಭರದಿಂದ ಸೋಂಕಲು | ವರಗಲ್ಲಿನ ಮೇಲೆ ವರಸಿದಂತಾಗುವದೊ ಇದಹುದೋ | ಧರೆಯೊಳು ಸುಜನರ | ಕರದು ಸುಜ್ಞಾನವ | ಅರುಹಿದ ಆನಂದ | ವರ ಮುನಿಯೇ ವಿ | ಸ್ತರ ಕರುಣಾಂಬುಧಿ ವಿಜಯವಿಠ್ಠಲನ್ನ ಚರಣವ ತೋರಿಸಿ ತೊರೆಯಯ್ಯಾ ಪ್ರಾಣಾ ||3||

Thoughts & Reflections

0

No reflections shared yet. Be the first to share your thoughts!

Share your thought