Bhasaka
← Back to home

ಆರಸಿಕೊಡು ಒಬ್ಬಳ ಅರಸಿಕೊಂಬೆ

Author: ವಿಜಯದಾಸCategory: ಶ್ರೀಕೃಷ್ಣ
ಆರಸಿಕೊಡು ಒಬ್ಬಳ ಅರಸಿಕೊಂಬೆ | ಅರಸಿಕೊಂಬೆ ಮನಸ್ಸಿಗೆ ಬಂದವಳ ಶ್ರೀ ರುಕ್ಮಿಣಿ ಸಂಗಡ ಕೇಳಿಯಲಿ ಶ್ರೀ ರಮಣ ಇರಲು | ನಾರದಮುನಿ ಬಂದು ಕುಳಿತು ಷೋಡಶೋಪಚಾರವ ಕೊಂಡು ಮಾತಾಡಿ ಬೇಡಿದ ||1|| ನಾರಿಯರು ನಿನಗೆ ಉಂಟಾಗ ಈರೈದು ಸಾವಿರ ನೂರಾಎಂಟು ಮಂದಿಯೊಳಗತಿ ಚಲುವಿಯ ಕಾರುಣ್ಯವನು ಮಾಡುಬೇಕು ಪರಾಕು ||2|| ಕೇಳೈ ಮಹ ತಪಸಿಯನ್ನೀಗ ವೇಳ್ಯ ಮೀರಗೊಡದೆ | ಲಾಲಿಸು ಮಾತನು ನಾ ನಿಲ್ಲದೆ | ಸತಿ ಆಲಯಕೆ ವೇಗ ಪೋಗು ನೀ ಸಾಗು ||3|| ನಿಂದಿರದೆ ನಾರದಾ ಗೋಪಿಯವರ ಮಂದಿರವ ಸುತ್ತಿದಾ | ಒಂದೊಂದು ಮನೆಯಲಿ ಸೋಜಿಗ ಅತಿಶಯ | ಅಂದು ನಾರದಗೆ ತಾ ತೋರಿದ ಬಿರುದಾ ||4|| ಒಂದೆ ಮನೆಲಚ್ಯುತಾ ಅನಂತ ಒಂದು ಕಡೆ ಗೋವಿಂದ | ಒಂದೆರಡು ನಾಲ್ಕು ಆರಭ್ಯವಾಗಿ ನೂರೊಂದು ಪರಿಯಂತ ಏಕಾಂತ ||5|| ಪಗಡಿಯೊಳೊಂದು ಮನೆ | ಚದುರಂಗ ನಗೆಕೂಟ ಒಂದು ಮನೆ | ಮಗುವು ಮುದ್ದಾಡಿ ಮಂಚದ ಮೇಲೆ ಮಡದಿಯಾ | ಬಿಗಿದಪ್ಪಿ ಸವಿನಾಡುವ ನೋಡಾ||6|| ಉಯ್ಯಾಲೆ ಒಂದು ಕಡೆ ಕೈಗಳು ಹೋಯಿದಾಟ ಒಂದು ಮನೆ | ಮನ್ಯರಾದ ಶುದ್ಧಿ ಮಕ್ಕಳ ಶೋಭನಾ | ಪಯಣಗತಿಯಲಿದ್ದ ವಾರ್ತಿ ಒಂದರ್ಥಿ||7|| ಕರುಗಳು ಒಂದು ಕಡೆ ಬಿಡುತ ತುರುಗಳ ಒಂದು ಮನೆ | ಕರಕೊಂಡು ಕುಡಿಯುತಾ | ತರುಣಿಯ ತುರುಬಿಗೆ ಅರಳಿದ ಕುಸುಮವ ಮುಡಿಸುತ ನುಡಿಸುತಾ||8|| ಸ್ನಾನವು ಒಂದು ಕಡೆ ಸಂಧ್ಯಾನ ಮೌನವು ಒಂದು ಕಡೆ | ಧ್ಯಾನ ಜಪ ತಪ ವ್ಯಾಖ್ಯಾನ ಪುರಾಣ | ದಾನ ಧರ್ಮಗಳ ಕೊಡುವನು ನಡೆವನು ||9|| ನಿಂದಿದ್ದ ಒಂದು ಮನೆ ಎಣ್ಣೆ ಪೂಸಿ ಮಿಂದುಂಡು ಒಂದು ಮನೆ | ಕಂದಗಳಾಡಿಸಿ ಪರಿಪರಿಯಿಂದಲೆ ಒಂದು ಅನಂತ ಇದ್ದಾ ಅನಿರುದ್ಧಾ||10|| ಬೆರಗಾಗಿ ಬೆಡಗು ನೋಡಿ ತಿರುಗಿ ಬಂದು ಹರಿಯ | ಚರಣಕ್ಕೆ ಬಿದ್ದು | ಅರಿಯದೆ ಮರುಳಾದೆ ವಿಜಯವಿಠ್ಠಲರಾಯ | ಪರಬ್ರಹ್ಮ ನೀನಲ್ಲದಿಲ್ಲಾ ಇನ್ನಿಲ್ಲಾ ||11||

Thoughts & Reflections

0

No reflections shared yet. Be the first to share your thoughts!

Share your thought