Bhasaka
← Back to home

ತಾಯಿ ನೀನೆನ್ನ ಶಿಕ್ಷಿಸಲು

Author: ಸ್ವಾಮಿ ಹರ್ಷಾನಂದCategory: ಶ್ರೀದೇವಿRaaga: ಭೀಮಪಲಾಸೀTaala: ತ್ರಿತಾಲ
ತಾಯಿ ನೀನೆನ್ನ ಶಿಕ್ಷಿಸಲು ರಕ್ಷಿಪರಾರು ತ್ರಿಭುವನದೊಳು ಹೇ || ನಿನ್ನನೆ ನಂಬಿಯೆ ಅನ್ಯರ ತ್ಯಜಿಸಿದೆ ನೀಯೆನ್ನ ತ್ಯಜಿಸಲು ಗತಿ ಯಾರಿನ್ನು || ಮಾನುಷ ಜನ್ಮವ ಮುಕ್ತಿಯ ಆಸೆಯ ಶ್ರೀಗುರುಪಾದವ ಕರುಣಿಸಿದೆ ತಾಯಿ | ಎನ್ನಯ ದೋಣಿಯ ನಿನ್ನಯ ದಡದಲಿ ಮುಳುಗಿಸಿದರೇ ನೀನೇ ಕಾಯುವರಾರು ಕಾಯುವರಾರು ಜಗಜ್ಜನನಿ ||

Thoughts & Reflections

0

No reflections shared yet. Be the first to share your thoughts!

Share your thought