Bhasaka
← Back to home

ಆರೀಗ ನೀ ಎನ್ನ ಕಣ್ಣು ಮುಚ್ಚಿದೆಯೊ

Author: ವಿಜಯದಾಸCategory: ಶ್ರೀಕೃಷ್ಣ
ಆರೀಗ ನೀ ಎನ್ನ ಕಣ್ಣು ಮುಚ್ಚಿದೆಯೊ ಕು- | ಮಾರ ಮೌನದಲಿದ್ದಿ ಮಾತನಾಡಯ್ಯಾ ಇಂದಿರಾ ಭೂದೇವಿ ಆಳಿದವನೊ | ನಂದ ಗೋಕುಲದಲ್ಲಿ ಪುಟ್ಟಿದವನೊ || ಮಂದಿರ ವೈಕುಂಠ ಶ್ರೀನಿವಾಸನೊ | ಕರಿ - | ಬಂಧನ ವಿನಾಶದ ವಿಠ್ಠಲನೊ ||1|| ಅಂಬರೀಷನ ಶಾಪ ಪರಿಹರನೊ | ಶಂಭು ಮೊರೆಯಿಡಲು ಕಾಯಿದವನೊ || ಕಂಭದಿಂದೊಡೆದು ಬಂದವನೊ | ತ್ರಿ - ಯಂಬಕನ ಭಕ್ತನ ಸಂಹರನೊ ||2|| ಬೆರಳಲ್ಲಿ ಬೆಟ್ಟವನೆತ್ತಿದವನೊ | ದುರುಳ ಕಾಳಿಂಗನ ತುಳಿದವನೊ || ಒರಳನು ಕಾಲಲ್ಲಿ ಎಳೆದವನೊ | ಚೆಲ್ವ ಸಿರಿ ವಿಜಯವಿಠ್ಠಲರಾಯನೊ ||3||

Thoughts & Reflections

0

No reflections shared yet. Be the first to share your thoughts!

Share your thought