Bhasaka
← Back to home

ಆವ ಜನುಮದ ಪಾಪ ವೊದಗಿತೋ

Author: ವಿಜಯದಾಸCategory: ಶ್ರೀಕೃಷ್ಣ
ಆವ ಜನುಮದ ಪಾಪ ವೊದಗಿತೋ ಎನಗಿಂದು | ದೇವ ಗಂಗೆಯ ನೋಡಿದೆ ದೇವಕೀಸುತ ಒಲಿದು ಕರೆತಂದು ಎನ್ನನು | ಪಾವನ್ನ ಮಾಡಿದನು ಇನ್ನೂ-ಮುನ್ನೂ ಅ.ಪ ಗುರುಗಳನು ವಹಿಸಿ ಭೂಸುರರಿಗೆ ಕಠಿಣ | ಉ- ತ್ತರ ಪೇಳಿಸಾಗಿದ್ದನೊ | ವರ ಬ್ರಾಹ್ಮಣರ ತಪ್ಪು ಬಲು ಇರಲು ಇಲ್ಲದೇ | ಸರಿಯೆಂದು ಸ್ಥಾಪಿಸಿದೆನೊ | ಮುರಿವ ಲಗ್ನಕೆ ಪೋಗಿ ಪುಸಿ ದ್ರವ್ಯವನೆ ಪೇಳಿ | ಮರಳಿ ಪೂರ್ತಿಸಿ ಇದ್ದೆನೊ | ವರ ವಿಪ್ರರಿಗೆ ವಧೆಯು ಬರಲು ಸಾಕ್ಷಿಯಾಗಿ | ಪರಿಹರಿಸಿ ಬಂದಿದ್ದನೋ ಏನೋ ||1|| ಘನ ತೀರ್ಥಯಾತ್ರೆಗೆ ಪೋಗುವಾಗ-ಲು | ವಂ ಚನೆ ಕರ್ಮ ಮಾಡಿದ್ದೆನೊ | ಜನಪತಿಗಳ ಮಾತು ಕೇಳದೆ ಧರ್ಮಕ್ಕೆ | ಅನುಕೂಲನಾಗಿದ್ದೆನೊ | ಮನೆಗೆ ಬಂದತಿಥಿಗಳು ಜರಿದು ಪಿತ್ರಾದ್ಯರಿಗೆ | ಉಣಿಸಿ ಸುಖಪಡಿಸಿದ್ದೆನೊ | ವನಗಳನು ಕಡಿದು ದೇವಾಲಯವ ಕಟ್ಟಿಸಿ | ಕ್ಷಣ ಕ್ಷಣಕೆ ಅರ್ಚಿಸೆದೆನೋ ಏನೊ ||2|| ಉತ್ತಮನು ಮನೆಗೆ ಬಂದಾಗ ಮಾಡುವಂಥ | ಸತ್ಕರ್ಮ ತೊರೆದಿದ್ದೆನೋ | ಹೆತ್ತವರ ಬಾಂದವರ ಧನದಿಂದ ಕೆರೆ ಭಾವಿ | ಹತ್ತೆಂಟು ಕಟ್ಟಿಸಿದೆನೊ | ದತ್ತಾಪಹಾರವನು ಮಾಡಿ ಅದರಿಂದನಗ್ನಿ- ಹೋತ್ರವನು ಸಾಧಿಸೆದೆನೊ | ಇತ್ತ್ಯಧಿಕ ನಿರ್ಬೀಜ ಪಾಪಗಳನೆಸಗಿ | ಕೃ- ತಾರ್ಥನಾದೆನೊ ವಿಜಯವಿಠ್ಠಲನ್ನ ಕರುಣದಲಿ||3||

Thoughts & Reflections

0

No reflections shared yet. Be the first to share your thoughts!

Share your thought