Bhasaka
← Back to home

ಆವ ತಾ ಸುಖವೊ ಮತ್ತಾವನಂದವೊ

Author: ವಿಜಯದಾಸCategory: ಶ್ರೀಕೃಷ್ಣ
ಆವ ತಾ ಸುಖವೊ ಮತ್ತಾವನಂದವೊ | ಈ ಉಡುಪಿ ಯಾತ್ರಿ ಮಾಡಿದ ಮನುಜಗೆ ಮನದೊಳಪೇಕ್ಷಿಸೆ ಅವನೀಗ ಹದಿನಾಲ್ಕು | ಮನುಗಳು ಭೂಮಿ ಆಳುವ ತನಕಾ | ಕನಕ ರಜತಪೀಠ ಗೋಕುಲದಿಂದ | ಸ | ಜ್ಬನ ಮಾರ್ಗದಲ್ಲಿ ಗುಣವಂತ ನೆನೆಸುವ ||1|| ಒಂದು ಹೆಜ್ಜೆಯನಿಟ್ಟು ಸಾಗಿ ಬರುತಲಿರೆ | ಅಂದೆ ಸುರರೊಳು ಗಣನೆ ಎನ್ನಿ | ಒಂದಕ್ಕೆ ನೂರಾರು ಯಾಗ ಮಾಡಿದ ಫಲ | ತಂದು ಕೊಡುವ ಅಜನಾದಿ ಕಲ್ಪ ಪರಿಯಂತ||2|| ಅರ್ಧ ಮಾರ್ಗವು ಬರಲು ಬಂದೆ ದಿವಸದಲ್ಲಿ | ಸಾಧರ್ ತ್ರಿಕೋಟಿ ದೇವತೆಗಳಲಿ | ಊಧ್ರ್ವರೇತಸನಾಗಿ ಮಿಂದ ಫಲವಕ್ಕು | ಮೂರ್ಧಾಭಿಷಕ್ತನು ಬ್ರಹ್ಮಾಯ ಪರಿಯಂತ ||3|| ಕ್ಷೇತ್ರದ ಬಳಿಗಾಗಿ ಬರಲು ಅವನ ಏಳು | ಗೋತ್ರ ನೂರೊಂದು ಕುಲದವರು | ಗಾತ್ರವ ಮರೆದು ರೋಮಾಂಚನದಿಂದಲಿ | ಪಾತ್ರವನಾಡೋರು ಮೋಕ್ಷಮಾರ್ಗವ ಸಾರಿ||4|| ಸನ್ನಿಧಿಗೆ ಬಂದು ಕರವ ಜೋಡಿಸಿ ನಿಂದು | ಸನ್ನುತಿಸಿ ದರ್ಶನ ಮಾಡಲು | ತನ್ನ ಕರವ ತಿಳಿದು ಜ್ಞಾನ ಭಕುತಿ ಸಂ | ಪನ್ನ ವಿರುಕುತಿಲಿ ಗತಿಗಭಿಮುಖನಾಹ ||5|| ಮಧ್ವ ಸರೋವರದಲ್ಲಿ ಸ್ನಾನವಗೈದು | ಸಿದ್ಧಾಂತ ಕರ್ಮಗಳನನುಸರಿಸೀ | ಶುದ್ಧಾತ್ಮ ಕೃಷ್ಣನ ದೇವಾಲಯವ ಸಾರೆ | ಪೊದ್ದಿದಾ ಸತ್ಯಲೋಕದ ಸಭೆಯೊಳಗೆ ||6|| ಕೃಷ್ಣ ಕೃಷ್ಣ ಯೆಂದು | ನವ ವಿಧ ಪೂಜೆಯನ್ನು | ದೃಷ್ಟಿಯಿಂದಲಿ ನೋಡೆ ಅವನೆ ಮುಕ್ತಾ | ಮುಟ್ಟಿ ಪೂಜಿಸುವರ ಸತ್ಪುಣ್ಯ ವಿಜಯ | ವಿಠ್ಠಲ ತಾ ಬಲ್ಲ ನರರೆಣಿಸಲಳವಲ್ಲಾ ||7||

Thoughts & Reflections

0

No reflections shared yet. Be the first to share your thoughts!

Share your thought