Bhasaka
← Back to home

ಆವ ಪರಿಯಲಿ ಹರಿಯ ವೊಲಿಸು

Author: ವಿಜಯದಾಸCategory: ಶ್ರೀಕೃಷ್ಣ
ಆವ ಪರಿಯಲಿ ಹರಿಯ ವೊಲಿಸು ಈ ಉಪಾಯವು ತೋರಿ ಕೊಡುವೆನು ಉದಯದಲಿ ಎದ್ದೀಗ ಊರ ವಾರ್ತಿಯ ಬಿಟ್ಟು ಮುದದಿಂದ ವೃಂದಾವನ ಸೇವಿಸಿ ವದನದಲಿ ಶ್ರೀ ಹರಿಯನಾಮ ಗುಣಕಥೆಗಳನು ಪದೋಪದಿಗೆ ಪಾಡಿ ಕೊಂಡಾಡು ನಲಿದಾಡು ||1|| ಆಮೇಲೆ ದೇವರೆಡೆ ರಂಗವಾಲಿಯನಿಕ್ಕಿ ಕಾಮುಕನಾಗದಲೆ ಸ್ನಾನ ಸಂಧ್ಯಾ ನೇಮ ನಿತ್ಯವ ಮುಗಿಸಿ ದೇವತಾ ಪೂಜೆಗೈದು ಪ್ರೇಮದಿಂದಲಿ ದಾನ ಕರದಲ್ಲಿ ಮಾಡೊ ||2|| ಮಂಗಳ ಮೂರುತಿಯ ಅಂತರಂಗದಿ ನಿಲಿಸಿ ಶೃಂಗಾರದುಡಿಗೆ ಇಡಿಗಿಯನು ತೊಡಿಸಿ ಮಂಗಳಾರುತಿ ಬೆಳಗಿ ಮನದಲ್ಲಿ ನಲಿನಲಿದು ಕಂಗಳಿಂದಲಿ ನೋಡು ಹರಿಯ ಕೂಡಾಡು ||3|| ಮೂಲ ಗುಣ ಅವತಾರ ಮಹಿಮೆ ಮಹ ಉನ್ನತ ಲೀಲೆ ವಿನೋದ ಅತಿ ಆಶ್ಚರ್ಯವ ವ್ಯಾಳವ್ಯಾಳೆಗೆ ಪೋಗಿ ಉತ್ತಮ ಜ್ಞಾನಿಗಳಿಂದ ಕೇಳು ಕರ್ಣದಲಿ ಪರಮ ಹರುಷದಲೆ||4|| ಹರಿಚರಣಕ್ಕೇರಿಸಿದ ಶಿರಿ ತುಲಸಿ ಚಂಪಕ ವರ ಜಾಜಿ ಮಲ್ಲೆ ಮಲ್ಲಿಗೆ ಕ್ಯಾದಿಗೆ ಪರಿಪರಿ ಗಂಧ ಚಂದನ ದಿವ್ಯ ಪರಿಮಳ ಸರಕು ನಾಶಿಕದಲ್ಲಿ ಕೊಳ್ಳು ಸುಖ ಬಾಳು ||5|| ಅಶಿವರುಣ ಮಧ್ಯ ತ್ರಿವೇಣಿ ವಿಷ್ಣುಪಾದ ಎಸೆವ ಕುರುಕ್ಷೇತ್ರ ಅಯೋಧ್ಯ ಮಾಯಾ ವೃಷಭ ಗಿರಿ ಶ್ರೀರಂಗ ಕಂಚಿ ಮೊದಲಾಗ್ಯುಳ್ಳ ಹೆಸರಾದ ಪುಣ್ಯನಿಧಿ ಮಟ್ಟು ದುರಿತವ ಕುಟ್ಟು||6|| ಬೇಸರದಲೀಪರಿಚರಿಸಿದರೆ ಜನನಾದಿ ನಾಶನವ ಮಾಡಿ ನಾರದವರದನು ದಾಸ ಪುರಂದರಗೆ ವೊಲಿದಂತೆ ವಿಜಯವಿಠ್ಠ ಲೇಶ ವೆಂಕಟ ನಿನಗೆ ಪರಮ ಪದವೀಯನೀವ ||7||

Thoughts & Reflections

0

No reflections shared yet. Be the first to share your thoughts!

Share your thought