Bhasaka
← Back to home

ಆವ ಬಗೆಯಿಂದ ಸಲಿಗೆಯನಿತ್ತಿಯೊ

Author: ವಿಜಯದಾಸCategory: ಶ್ರೀಕೃಷ್ಣ
ಆವ ಬಗೆಯಿಂದ ಸಲಿಗೆಯನಿತ್ತಿಯೊ ಮಾವಮರ್ದನ ರಂಗ ನಿನ್ನ ದಯಾ ತಿಳಿಯದು ಅಂದರೆ ಆನಂದ ಅನಂದದೇ ಅನಾನಂದ ನಿಂದದೆ ಗೋಕುಲ ನಿಲದದೆ ವ್ಯಾಕುಲ ಬಂದದೆ ಪುರುಷಾರ್ಥ ಬಾರದಿದ್ದರೆ ವ್ಯರ್ಥ ಮಂಧರಧರ ನಿನ್ನ ಮನಸು ಬಂದದ್ದೆ ಸರಿ ||1|| ಕೊಟ್ಟದ್ದೆ ಪುರುಷಾರ್ಥ ಕೊಡದಿಪ್ಪದೆ ಅನರ್ಥ ಅಟ್ಟಿ ಬರುವ ಪಾಪ ಸುಟ್ಟು ಬಿಡು ನಿರ್ಲೇಪ ತಟ್ಟಿದುದೆ ವೇದಾರ್ಥ (ತಟ್ಟದದೆ) ಮಿಥ್ಯ ವಿಠ್ಠಲ ನಿನ್ನ ಭಕ್ತರಿಗೆ ನೀ ಬಲು ಸುಲಭಾ ||2|| ಹರಿ ನಿನ್ನ ಶರಣರ ಮನಸ್ಸು ಆವರಕಾದ ದೆರಗಲು ಆಕ್ಷಣವೆ ಸಿದ್ಧ ಮಾಳ್ಪೆ ಕರುಣ ನಿಧಿಯೆ ನಮ್ಮ ವಿಜಯವಿಠ್ಠಲ ನಿನ್ನ ಸರಿಯಾದ ದೇವರನು ಕಾಣೆ ತ್ರಿಭುವನದಲ್ಲಿ||3||

Thoughts & Reflections

0

No reflections shared yet. Be the first to share your thoughts!

Share your thought