Bhasaka
← Back to home

ಆವಗತಿ ಎನಗೆ ವೈಕುಂಠಪತಿಯೆ

Author: ವಿಜಯದಾಸCategory: ಶ್ರೀಕೃಷ್ಣ
ಆವಗತಿ ಎನಗೆ ವೈಕುಂಠಪತಿಯೆ | ಕಾವ ಕರುಣಿಯೆ ಸರ್ವದೇವರ ದೇವ ಉದಯದಲಿ ಎದ್ದು ನಿನ್ನ ನಾಮವೆನ್ನದೆ | ಉದರಕಿನ್ನೇನು ಮಾಡಲಿ ಎನ್ನುತಾ | ಕದಗಳಾ ಸರಸುತ್ತ ಕಂಡಲ್ಲಿ ತಿರುಗಿದೆ | ಮದ ಗರ್ವದಲಿ ಬಾಳ್ವ ಮನುಜ ಶಿರೋಮಣಿಗೆ ||1|| ಧನವ ಘಳಿಸವ ವಾತ್ಸಲ್ಯವಲ್ಲದೆ ಸಾ | ಧನಕೆ ಒಮ್ಮೆ ಮನಸ್ಸು ಎರಗಲಿಲ್ಲಾ | ಮನುಜರೊಳಗೆ ಖ್ಯಾತಿಯಾಗುವೆನೆಂಬೊ | ವೇ | ದನೆ ಮಿಗಿಲಲ್ಲದೆ ಭಕುತಿ ಮತ್ತಿಲ್ಲ ||2|| ಒಬ್ಬರಕಿಂತಲಧಿಕನಾಗುವೆನೆಂದು | ಉಬ್ಬಿ ಪರರಾ ಸೇವೆಯನು ಮಾಡುವೆ | ಹಬ್ಬಿದ ಪಾಪದ ಸರವಿಗೆ ಉರುಲು ಬಿದ್ದು | ಸುಬ್ಬ್ಬಿದ ಸುಕೃತವ ಕಳಕೊಂಡೆನಯ್ಯಾ ||3|| ಪೂರ್ವದಲಿ ಉಂಡ ದು:ಖಗಳೆಲ್ಲ ಮರೆದು | ಸರ್ವದಾ ಗರ್ವದಲಿ ಸಜ್ಜನರ ಕೆಡನುಡಿದು | ಉರ್ವಿಯೊಳು ಬಲು ಬಲವಂತನೆನಸೀ | ಸರ್ವದಾ ಸರ್ವ ನರಕಂಗಳಲಿ ಬಿದ್ದು ಹೊರಳಿದೆನು||4|| ಇನ್ನಾದರೂ ದುರ್ಬುದ್ಧಿಯನ್ನು ಬಿಡಿಸಿ | ಪ್ರಾಸನ್ನ ಕರಿಸಿಕೊಳ್ಳೊ ಕರವ ಬಿಡದೆ | ಕನ್ಯಾಮಣಿ ಪತಿ ವಿಜಯವಿಠ್ಠಲರೇಯಾ | ಎನ್ನ ಭಾವವು ನಿನ್ನದಲ್ಲವೇನಯ್ಯಾ"||5||

Thoughts & Reflections

0

No reflections shared yet. Be the first to share your thoughts!

Share your thought