Bhasaka
← Back to home

ಆವದೆನೆಗೆ ಪ್ರೀತಿ ಎಂದೆಂಬಿಯಾ

Author: ವಿಜಯದಾಸCategory: ಶ್ರೀಕೃಷ್ಣ
ಆವದೆನೆಗೆ ಪ್ರೀತಿ ಎಂದೆಂಬಿಯಾ | ದೇವ ದೇವಕಿ ತನುಜ ಬಿನ್ನಪವ ಮಾಡುವೆನೊ ದೊರೆತನವಲ್ಲೆ ಧನವಲ್ಲೆ ಒಬ್ಬರ ಬಳಿಯ | ಹಿರಿಯತನವಲ್ಲೆ ಹಿಗ್ಗುವುದು ವಲ್ಲೆ | ಹರಿ ನಿನ್ನ ಚರಣಗಳ ಸ್ಮರಿಸುವ ಭಾಗವತರ | ಅರಮನೆಯ ಬೀದಿಯಲಿ ಹೊರಳುವ ಭಾಗ್ಯವ ಕೊಡು ||1|| ಪಂಡಿತನಾಗಲಿವಲ್ಲೆ ಫಲವಲ್ಲೆ ನಾವು ಪ್ರ | ಚಂಡ ಯೋಗಗಳೊಲ್ಲೆ ಯಾಗವಲ್ಲೆ | ಥಂಡ ಥಂಡದಿ ನಿನ್ನ ಕೊಂಡಾಡುವರ ಬಳಿಯ | ಕೊಂಡರಾಗಿಪ್ಪವರ ಸೇರುವ ಭಾಗ್ಯವ ಕೊಡು ||2|| ಅಂದಣವೇರಲಿವಲ್ಲೆ ಆತ್ಮಸುಖವಲ್ಲೆ ನಾ | ನೆಂದು ಪೇಳುವರ ಸಂಗತಿಯವಲ್ಲೆ | ಇಂದಿರಾಪತಿ ನಿನ್ನ ವಂದಿಸುವ ಜನ ನಿತ್ಯ | ನಿಂದಂಗಳದೊಳಗೆ ಯಿಪ್ಪ ಭಾಗ್ಯವ ಕೊಡು ||3|| ರಸ ರಸಾಯನ ವಲ್ಲೆ ಹಸನಾದ ಪಟ್ಟಿ ರಂ | ಜಿಸುವದುವಲ್ಲೆ ರಾಗಗಳುವಲ್ಲೆ | ವಸುದೇವ ಸುತ ನಿನ್ನ ಪೆಸರು ಎಣಿಸುವವರ | ಶಿಶುವಾಗಿ ಬದಕುವ ಕುಶಲ ಭಾಗ್ಯವ ಕೊಡು ||4|| ಪುಣ್ಯ ತೀರ್ಥಗಳು ನಿನ್ನ ಮನಸಿಗೆ ಬಂದ | ವನ್ನು ಮಾಡಿಸು ಬಿಡದೆ ಮನ್ನಿಸೆನ್ನ | ಚನ್ನ ಮೂರುತಿ ಚೆನ್ನ ವಿಜಯವಿಠ್ಠಲರೇಯ | ಎನ್ನ ವಂದನೆಯನ್ನು ಮುನ್ನು ನೀ ಕೈಕೊಂಡು||5||

Thoughts & Reflections

0

No reflections shared yet. Be the first to share your thoughts!

Share your thought