Bhasaka
← Back to home

ಆವಪರಿಯಲಿ ನಿನ್ನನು ವೊಲಿಸುವೆ

Author: ವಿಜಯದಾಸCategory: ಶ್ರೀಕೃಷ್ಣ
ಆವಪರಿಯಲಿ ನಿನ್ನನು ವೊಲಿಸುವೆ ದೇವ ಎನ್ನೊಳಗೆ ಒಂದಾದರೂ ಗುಣವಿಲ್ಲಾ ಅರಿಯೆ ಧರ್ಮವ ಪಾಪ | ಮರಿಯೆ ಉತ್ತಮರನ್ನ ಕರಿಯೆ ನಾಮಕೆ ಬಾಯಿ | ತೆರಿಯೆ ಸುರಿಯೆ ಜರಿಯೆ ಮೋºಕೆ ಮನ | ಮುರಿಯೆ ವ್ಯಾಕುಲಜ್ಞಾನಾಂ | ಕುರಿಯ ನಿನ್ನವರೊಳು | ಬೆರಿಯೆನರಿಯೆ ಸರಿಯೆ ದುಸ್ಸಂಗ ಕಥಾ | ಬರಿಯೆ ಕರದಿ ಯಾತ್ರಿಗೆ ಹರಿಯೆ ಪುಣ್ಯ ತೀರ್ಥ | ವರಿಯೆ ಮೊರಿಯೆ ಹರಿಯೆ ಜಗದೊರೆಯೆ | ಸಿರಿದೊರೆಯೆ ಅಘ ಕರಿಗೆ ಕೇಸರಿಯೆ ಮತ್ತಾ | ರರಿಯೆ ನಿನ್ನವರ ಮರಿಯೆ||1|| ನಡಿಯೆ ಸುಮಾರ್ಗ ವ್ರತವಿಡಿಯೆ ಮುಡಿದ ಪೂವು ಮುಡಿಯೆ ಕಾಮದ ಮರ್ಮ | ತಡಿಯೆ ಕಡಿಯೇ ಕುಡಿಯೆ ಪಾಪೋದಕವ ನುಡಿಯೆ ಮಂಗಳ ವಾರ್ತಿ ಪಿಡಿಯೆ ಭಕುತಿ ನೀತಿ ಪಿಡಿಯೆ ಗುಡಿಯೇ ಹುಡಿಯೆ ಸುಕೃತಿ ಕಾಳ | ಗೆಡಿಯೆ ಪರರೊಸ್ತಕ್ಕೆ ತೊಡಿಯೆ ಚಿಂತಾತುರವ | ವುಧಿಯೆ ಹೊಡಿಯೆ ಕೊಡಿಯೆ ಎನ್ನಗೊಡಿಯೆ ನೆಂ | ದೆಡೆಯಲ್ಲಿ ಸೂಸಿದಾ ಪುಡಿಯಲ್ಲಿ ವೊಡಬೆರಸೆ | ಅಡಿಗಡಿಗೆ ಎನ್ನ ಕಡಿಗೆ ||2|| ಸುಳಿಯೆ ಕೀರ್ತನಿಗೆ ಮದ | ವಳಿಯೆ ಗುರುನಿಂದಕರ ಹಳಿಯೆ ಕಾಮದ ಕುಪ್ಪೆ | ಕಳಿಯೆ ಬಳಿಯೆ ತೊಳಿಯೆ ಮನನ ನರಕಕ್ಕೆ | ಮುಳಿಯೆ ಸುಮತಿಮಾರ್ಗ ತಿಳಿಯೆ ಪದವಿಗೆ ಪೋಗಿ | ಇಳಿಯೆ ಬೆಳಿಯೆ ಛಳಿಯೆ ಮುಂದಿನ ಜನನ | ಹೊಳೆಯೆಂಬೋದು ಅರಿದು ಶಳಿಯೆ ಸಂಚಿತ ಕರ್ಮ | ವಳಿಯೆ ತುಳಿಯೆ ವುಳಿಯೆ ಬೊಬ್ಬುಳಿಯೆ ಈ | ಕಳೆಯೇನುವಲ್ಲನಭ ಸುಳಿ ಹೃದಯಾವಳಿಯಲ್ಲಿ | ವಿಜಯವಿಠ್ಠಲವೊಳಿಯೆ||3||

Thoughts & Reflections

0

No reflections shared yet. Be the first to share your thoughts!

Share your thought