Bhasaka
← Back to home

ಆವರೋಗವೆ ಯೆನಗೆ ದೇವ ಧನ್ವಂತ್ರೀ

Author: ವಿಜಯದಾಸCategory: ಶ್ರೀಕೃಷ್ಣ
ಆವರೋಗವೆ ಯೆನಗೆ ದೇವ ಧನ್ವಂತ್ರೀ ಸಾವಧಾನದಿಯೆನ್ನ ಕೈಪಿಡಿದು ನೋಡೋ ಹರಿಮೂರ್ತಿ ಕಾಣಿಸದು ಎನ್ನ ಕಂಗಳಿಗೆ ಹರಿಕೀರ್ತನೆ ಕೇಳದೆನ್ನ ಕಿವಿಗಳಿಗೆ ಹರಿಯ ಶ್ರೀಗಂಧವಾಘ್ರಾಣಿಸದೆನ್ನ ನಾಸಿಕವು ಹರಿಯಪ್ರಸಾದ ಜಿಹ್ವೆಗೆ ಸವಿಯಾಗದು ||1|| ಹರಿಪಾದ ಪೂಜಿಸೆ ಹಸ್ತಗಳು ಚರಿಸದು ಹರಿಗುರುಗಳಂಘ್ರಿಗೆ ಶಿರ ಬಾಗದು ಹರಿಯ ಸೇವೆಗೆ ಯೆನ್ನ ಅಂಗಗಳು ಚಲಿಸದು ಹರಿಯಾತ್ರೆಗೆನ್ನ ಕಾಲುಗಳೇಳದೋ ||2|| ಅನಾಥಬಂಧು ಶ್ರೀವಿಜಯವಿಠ್ಠಲರೇಯ ಯೆನ್ನ ಭಾಗ್ಯದ ಸ್ವಾಮಿಯಾಗಿ ನೀನೊ ಅನಾದಿಕಾಲದ ಘನರೋಗವನೆ ಬಿಡಿಸು ನಿನ್ನ ಉಪಕಾರವ ನಾನೆಂದಿಗೂ ಮರೆಯೇ ||3||

Thoughts & Reflections

0

No reflections shared yet. Be the first to share your thoughts!

Share your thought