Bhasaka
← Back to home

ಆವಾವ ಬಗೆಯಿಂದ ಹರಿಗರ್ಪಿಸೊ

Author: ವಿಜಯದಾಸCategory: ಶ್ರೀಕೃಷ್ಣ
ಆವಾವ ಬಗೆಯಿಂದ ಹರಿಗರ್ಪಿಸೊ ಭಾವ ಶುದ್ಧನಾಗಿ ಮುಖ್ಯತ್ವ ವಹಿಸದೆ ನೋಡುವ ನೋಟಗಳು ಹರಿಯೆ ನೋಡಿದನೆನ್ನಿ ವೋಡುವ ಆಟಗಳು ಹರಿಯೆ ವೋಡಿದನೆನ್ನಿ ಆಡುವ ಮಾತುಗಳು ಹರಿಯೆ ಆಡಿದನೆನ್ನಿ ||1|| ನಡಿವ ನಡಿಗೆ ಎಲ್ಲ ಹರಿಯೆ ನಡೆದನೆನ್ನಿ| ಕೊಡುವ ದಾನಗಳು ಹರಿಯೆ ಕೊಟ್ಟನೆನ್ನಿ ಒಡನಾಡುವ ಲೀಲೆ ಹರಿಯೆ ಆಡಿದನೆನ್ನಿ ಪಿಡಿವ ಚೇಷ್ಟೆಗಳೆಲ್ಲ ಹರಿಯೆ ಪಿಡಿದನೆನ್ನಿ ||2|| ಕೇಳುವ ಶಬ್ದಗಳು ಹರಿಯೆ ಕೇಳಿದನೆನ್ನಿ ಹೇಳುವ ವಿಧವನಿತು ಹರಿಯೆ ಎನ್ನಿ ಮಾಲೆ ಧರಿಸುವುದು ಹರಿಯೆ ಧರಿಸಿದನೆನ್ನಿ ಮೇಲು ಸುಖ ಬಡುವುದು ಹರಿಯೆ ಎನ್ನಿ||3|| ವಾಸನೆ ಕೊಂಬುವದು ಹರಿಯೆ ಕೊಂಡ ಎನ್ನಿ ಭೂಷಣವಿಡುವುದು ಹರಿಯೆ ಎನ್ನಿ ಲೇಸು ಬಯಸುವುದು ಹರಿಯೆ ಬಯಿಪನೆನ್ನಿ ಗ್ರಾಸ ಮೆಲುವದೆಲ್ಲ ಹರಿಯೆ ಎನ್ನಿ ||4|| ಸತಿಯ ಕೂಡುವದೆಲ್ಲ ಹರಿಯೆ ಕೂಡಿದನೆನ್ನಿ ಹಿತವಾಗಿಪ್ಪದು ಹರಿಯೆ ಎನ್ನಿ ಸುತರ ಪಡೆದಾದಲ್ಲಿ ಹರಿಯೆ ಪಡೆದನೆನ್ನಿ ಪ್ರತಿಕೂಲವಾಗುವುದೆ ಹರಿಯೆ ಎನ್ನಿ ||5|| ಬಳಗ ಸಾಕುವುದೆಲ್ಲ ಹರಿಯೆ ಸಾಕಿದನೆನ್ನಿ ಸುಲಭನಾದರೆ ಹರಿಯಾದನೆನ್ನಿ ಗಲಭೆ ಮಾಡುವುದೆಲ್ಲ ಹರಿಯೆ ಮಾಡಿದನೆನ್ನಿ ಸುಳಿದಾಡುವುದೆಲ್ಲ ಹರಿಯೆ ಎನ್ನಿ ||6|| ಏನೆಂಬೆ ಹರಿ ಲೀಲೆ ನಿರ್ದೋಷ ನಿಸ್ಸಂಗ ಅನಂತಕಾಲಕ್ಕೂ ಎಲ್ಲಿದ್ದರು ಙÁ್ಞನಮಯ ಕಾಯ ವಿಜಯವಿಠ್ಠಲರೇಯ ನಾನಾ ವ್ಯಾಪಾರಗಳ ಮಾಳ್ಪನೆನ್ನಿ ||7||

Thoughts & Reflections

0

No reflections shared yet. Be the first to share your thoughts!

Share your thought