Bhasaka
← Back to home

ಇಂಥಾ ಪ್ರಭುವ ಕಾಣೆನೋ ಈಜಗದೊಳ

Author: ವಿಜಯದಾಸCategory: ಶ್ರೀಕೃಷ್ಣ
ಇಂಥಾ ಪ್ರಭುವ ಕಾಣೆನೋ ಈಜಗದೊಳ- ಗಿಂಥಾ ಪ್ರಭುವ ಕಾಣೆನೋ ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗ- ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ಅ.ಪ. ಬೇಡಿದಿಷ್ಟವ ಕೊಡುವ-ಭಕ್ತರ ತಪ್ಪು ನೋಡದೆ ಬಂದು ಪೊರೆವ ಗಾಡಿಕಾರನು ಗರುಡಾ - ರೂಢ್ಯ ಗುಣವಂತ ಮಹಾ ಪ್ರೌಢ ಪ್ರತಾಪಿ ಜಗದಿ ಗೂಢದಿಂ ಸಂಚರಿಪ ಪಾಡಿ ಪೊಗಳಿ ಕೊಂಡಾಡುವವರ ಮುಂ- ದಾಡುತಲಿಪ್ಪನು ನಾಡೊಳಗಿದ್ದರು ಕೇಡಿಗನೇ ನಾಡಾಡಿಗಳಂದದಿ ಈಡುಂಟೇನೋ ಈ ವೆಂಕಟಗೆ-ಇಂಥಾ ||1|| ನಿಗಮ ತತಿಗಳರಿಯದ- ನೀರಜಭವಾ- ದ್ಯಗಣಿತ ಸುರರು ಕಾಣದ ಜಗದೊಡೆಯನು ಭಕ್ತ- ರುಗಳಿಗೊಲಿದು ತ್ರಿಸ್ಥಾ- ನಗಳತ್ಯಜಿಸಿ ಕಲಿ ಯುಗದಿ ಭೂಮಿಗೆ ಬಂದು ಅಗಣಿತ ಸುಗುಣಾರ್ಣವ- ಶ್ರೀ ಹರಿಯೇ ಜಗದೊಳು ಸೇವಾದಿಗಳನು ಕೊಳುತಿಹ ಅಘಹರ ಮೋಕ್ಷಾದಿಗಳನೆ ನೀಡುತ ನಗೆಮೊಗದಲಿ ಚನ್ನಿಗನಿಂತಹನೊ - ಇಂಥಾ ||2|| ಭಾರ್ಗವಿ ಭೂಮಿವಲ್ಲಭ - ಭವದೂರ ಭಕ್ತ ವರ್ಗಕೆ ಇವಸುಲಭ ನಿರ್ಗುಣ ನಿರ್ವಿಕಾರ- ಸ್ವರ್ಗದೈಶ್ವರ್ಯದಿಂದಾ- ನಘ್ರ್ಯದ ಪದವನೀವ ದೀರ್ಘಾಯುವಂತನೀತ ಭಾರ್ಗವರಾಮ ನೃಪರ್ಗಳನೆಲ್ಲರ - ಣಾಗ್ರದಿ ಜಯಿಸಿದ ಉಗ್ರಪ್ರತಾಪಿ ಅಗ್ರಗಣ್ಯ ಸದ್ವಿಗ್ರಹ ಶ್ರೀಮದ - ನುಗ್ರಹ ಮಾಡುತ ದುರ್ಗುಣ ಕಳೆವ ||3|| ನಿರ್ದುಃಖಾನಂದ ಭರಿತಾ - ನಿರ್ವಾಣ ಸುಖಕೆ ಆದ್ರ್ರಹೃದಯ ತೋರುತ ನಿದ್ರೆಯೊಳಿದ್ದವಗು - ಪದ್ರಬಡಿಸಿ ದೈತ್ಯ ಕ್ಷುದ್ರನಂಕೊಲಿಸಿ ಸು ಭದ್ರ ಜಗಕೆ ಇತ್ತ ನಿರ್ದಯನಲ್ಲ ಸಮುದ್ರಶಯನ ಗೋ- ವರ್ಧನ ಗಿರಿಯನು ಉದ್ಧರಿಸಿದ ಯದು ವರ್ಧನ ದನುಜ ವಿಮರ್ದನ ಲಕ್ಷ್ಮೀ ಜ - ನಾರ್ದನ ವರ ಶೇಷಾದ್ರಿ ನಿವಾಸ - ಇಂಥಾ ||4|| ವಾರಿಜಾಸನ ಮನೋಜಾ ಈರ್ವರು ಸುತರು ಸುರತರಂಗಿಣಿ ತನುಜಾ ಪುರವೇ ವೈಕುಂಠ ಇಂದ್ರಾದ್ಯ ಮರರು ಕಿಂಕರರು ಗರುಡವಾಹನ ಉರಗ ಪರಿಯಂಕ ನಿಷ್ಕಳಂಕ ಸರಿದೊರೆಗಳ ನಾನರಿಯೆನು ವೆಂಕಟ ಗಿರಿಯಲಿ ಇರುತಿಹ ಕರುಣೆಗಳರಸನೆ ಮರೆಯದೆ ಸಲಹೋ ಶರಣಾಗತರನು ಮರುತಾಂತರ್ಗತ ಸಿರಿ ವಿಜಯವಿಠ್ಠಲಾ - ಇಂಥಾ ||5||

Thoughts & Reflections

0

No reflections shared yet. Be the first to share your thoughts!

Share your thought