Bhasaka
← Back to home

ಇಂದಿರಾದೇವಿಯ ರಮಣ ಬಾ

Author: ವಿಜಯದಾಸCategory: ಶ್ರೀಕೃಷ್ಣ
ಇಂದಿರಾದೇವಿಯ ರಮಣ ಬಾ ವೃಂದಾರಕ ಮುನಿವಂದ್ಯ ಬಾ ಸಿಂಧುಶಯನ ಗೋವಿಂದ ಸದಮಲಾ ನಂದ ಬಾ ಮಾವನ ಕೊಂದ ಬಾ ಗೋಪಿಯ ಕಂದ ಬಾ ಹಸೆಯ ಜಗುಲಿಗೆ ಶೋಭಾನೆ ||1|| ಕೃಷ್ಣವೇಣಿಯ ಪಡೆದವನೆ ಬಾ ಕೃಷ್ಣನ ರಥ ಹೊಡೆದವನೆ ಬಾ ಕೃಷ್ಣೆಯ ಕಷ್ಟವ ನಷ್ಟವ ಮಾಡಿದ ಕೃಷ್ಣ ಬಾ ಯದುಕುಲ ಶ್ರೇಷ್ಠ ಬಾ ಸತತ ಸಂ ತುಷ್ಟ ಬಾ ಉಡುಪಿಯ ಕೃಷ್ಣ ಬಾ ಹಸೆಯ ಜಗುಲಿಗೆ ಶೋಭಾನೆ ||2|| ಎಲ್ಲರೊಳು ವ್ಯಾಪಕನಾಗಿಪ್ಪನೆ ಬಲ್ಲಿದ ಧೊರೆಯೇಜ್ಞಾನಿಗಳರಸನೆ ಎಲ್ಲಿ ನೋಡಲು ಸರಿಗಾಣೆ ವಿಜಯವಿ- ಠ್ಠಲ ಬಾ, ಅಪ್ರತಿಮಲ್ಲ ಬಾ ನೀ- ನಲ್ಲದಿಲ್ಲ ಬಾ, ಭಕುತವತ್ಸಲ ಬಾ, ಹಸೆಯ ಜಗುಲಿಗೆ ಶೋಭಾನೆ ||3||

Thoughts & Reflections

0

No reflections shared yet. Be the first to share your thoughts!

Share your thought