Bhasaka
← Back to home

ಇಂದು ನೋಡಿದೆ ಇಂದಿರೇಶ

Author: ವಿಜಯದಾಸCategory: ಶ್ರೀಕೃಷ್ಣ
ಇಂದು ನೋಡಿದೆ ಇಂದಿರೇಶ ಮುಕುಂದನ ಮುದ್ದು ರೂಪವ ಕಳೆದೆ ಸಂತಾಪವ ಪಂಚ ವರ್ಣದ ಪಕ್ಕಿ ಪೆಗಲಲ್ಲಿ ಮಿಂಚಿನಂದದಿ ತೋರುತಾ ವರಗಳ ಬೀರುತಾ ವೊಡನಿಪ್ಪ ಮಾರುತಾ ||1|| ಝಗಝಗಿಪ ಪದಯುಗಳ ಬಿಗಿದಪ್ಪಿ ತೆಗೆಯದಲೆ ಮನಪಾಡಿದೆ ಕುಣಿ ಕುಣಿ ದಾಡಿದೆ ಸಂತರ ಸಂಗ ಬೇಡಿದೆ ||2|| ಧನ್ಯನಾದೆನೊ ದಾನವಾರಿಯ ಘನ್ನ ವೈಭೋಗ ಕಂಡೆ ನಾ ಪುಣ್ಯವನು ಕೈಕೊಂಡೆ ನಾ ನಾಮಾಮೃತ ಉಂಡೆ ನಾ ||3|| ಏನು ಪೇಳಲಿ ಗುರುಗಳ ಕೃಪೆ ಸ್ವಾನೆ ನಿರುತ ಕರಗರವದು ಅಹಂಮತಿ ಮರೆವದು ಸುರಗಣ ಪೊರೆವುದು ||4|| ಕಮಲಹರ ಶಿರ ವಿಜಯವಿಠ್ಠಲ ಕಮಲಲೋಚನಾಭಾಸನ ಪನ್ನಗನಗ ವಾಸನಾಗುಣ ಮಂದಹಾಸನಾ||5||

Thoughts & Reflections

0

No reflections shared yet. Be the first to share your thoughts!

Share your thought