Bhasaka
← Back to home

ಇಂದು ನೋಡಿದೆ ಗೋವಿಂದನಾ ಸರ್ವ

Author: ವಿಜಯದಾಸCategory: ಶ್ರೀಕೃಷ್ಣ
ಇಂದು ನೋಡಿದೆ ಗೋವಿಂದನಾ ಸರ್ವ ಸುಂದರಸಾರ ವೆಂಕಟ ರಮಣನಾ ಭಾಗೀರಥಿಯ ಪೆತ್ತವನಾ ಭವ ರೋಗವ ಕಳೆವ ರಾಜೀವನೇತ್ರನಾ ಸಾಗರದೊಳಗೆ ಒಪ್ಪುವನಾ ಭಕ್ತ ಕೂಗಲು ನಿಲ್ಲದೆ ಒದಗಿ ಬರುವನಾ||1|| ನಿಲ್ಲದೆಳಿಪಿಗೆ ಪೊಳೆದನಾ ಗೋ ಪಾಲಕರಿಗೆ ವೈಕುಂಠ ತೋರಿದನಾ ನೀಲಾದೇವಿಗೆ ಬಲಿದವನಾ ಭೂ ಪಾಲಗೆ ಮೆಚ್ಚಿ ಸತ್ವರವನಿತ್ತವನಾ||2|| ವಿಶ್ವ ಮಂಗಳದಾಯಕನಾ ಅಹಿ ವಿಷ್ಟಕಸೇನರಿಂದ ಪೂಜೆಗೊಂಬುವನಾ ವಿಶ್ವರೂಪ ವಿಲಕ್ಷಣನಾ ಸರ್ವ ವಿಶ್ವ ಪರಿಪಾಲ ಪ್ರಣತಾರ್ತಿ ಹರನ||3|| ಸುರ ಶಿರೋಮಣಿ ಸದ್ಗುಣನಾ ಸು ದರಶನ ಶಂಖ ಭಜಕರಿಗೆ ಕೊಟ್ಟವನಾ ನಿರುತ ಆನಂದ ಭರಿತನಾ ದಿವ್ಯ ಮಿರುಗುವಾಭರಣದಿಂದಲಿ ನಿಂದಿಹನಾ ||4|| ಶಾಮವರ್ಣ ಚತುರ್ಭುಜನಾ ನಿಜ ಕಾಮಿನಿ ಸಂಗಡ ನಲಿದಾಡುವನಾ ಹೇಮ ಗಿರಿಯಲಿದ್ದವನಾ ದೇವ ಸ್ವಾಮಿ ತೀರ್ಥವಾಸ ವಿಜಯವಿಠ್ಠಲನಾ||5||

Thoughts & Reflections

0

No reflections shared yet. Be the first to share your thoughts!

Share your thought