Bhasaka
← Back to home

ಇಂದು ಪಾವನವಾಗಿರೊ

Author: ವಿಜಯದಾಸCategory: ಶ್ರೀಕೃಷ್ಣ
ಇಂದು ಪಾವನವಾಗಿರೊ | ಇಂದಿರಾ ರಮಣನ್ನ ದಿನ ವ್ರತವ ಮಾಡಿ ಜನನಿ ಜನಕ ಭ್ರಾತಾ ಅನುಜ ನಿಜಾಂಗನೆ | ತನಯರು ನೆರೆಹೊರೆ ಮನ ಜನಕೆ | ಬಿನಗು ವ್ರತವ ಬಿಟ್ಟು ವನಜನಾಭಾನ ಸಿರಿ | ದಿನ ತ್ರಯವನು ಅನುಸರಿಸಿರೆಂದು ||1|| ಏಕಾದಶಿದನ ವಿಕೇತನದಲಿ ಪಾಕ ಮಾಡಿದರದು | ಕಾಕಮಾಂಸ ಲೋಕದೊಳಗೆ ಸರಿ | ಲೋಕದೊಳಗೆ ಎಂದು | ತಾ ಕೂಗಿ ಸುಖದಲ್ಲೀ | ವಾದ ಪೇಳುತಲಿದ್ದು ಏಕ ಭಕುತಿಯಲ್ಲೀ||2|| ಹರಿದಿನದಲ್ಲಿ ನೀರು ಬೆರಳಲಿ ಸುರಿದಾ | ಭೂಸುರನು ಚಾಂಡಾಲನು ನಿರುತದಲೀ | ವರಗೋಮಾಂಸ ನರಕಾ | ನರಿ ನಾಯಿರಾಸ | ಸೂಕರ ಭಕ್ಷಣಿಗಿಂತ | ಪರಮ ಉತ್ತಮನೆಂದು ||3|| ಪ್ರಾಣತ್ಯಾಗವಾಗಿ ಹಾನಿ ಪ್ರಾಪುತದಿಂದ | ಏನೇನು ಸಂಕಟ ತಾನೊದಗೆ | ಆನಂದ ಮತಿ ಈವಾ ಶ್ರೀನಾಥನ ದಿವಸ | ಧಾನ್ಯದಲಿಟ್ಟು ನಿದಾನಕೆ ಗತಿ ಎಂದು||4|| ಇತರ ದಿವಸದಲ್ಲಿ ಅತಿಶಯದಿಂದಲೀ | ಕೃತ ಕರ್ಮಗಳು ವಿಹಿತವಹುದೂ | ರತಿಪತಿಪಿತನ ಅಪ್ರತಿವಾಸರದಲ್ಲೀ | ಅತಿ ಅವಶ್ಯಕವಾ ವರ್ಜಿತ ಮಾಡಿ ಸಜ್ಜನರು ||5|| ಎಲೆ ಹಾಕದೆ ಜಾಗರವ ಬೇಸರದಲೆ | ಲವಲವಿಕೆಯಿಂದ ಕವಿಗಳೊಡನೆ | ತವಕದಿಂದಲಿ ಪಾಡುತ ಗಾಯನ ಶುದ್ಧಾ | ಶ್ರವಣ ಮಾಡುತ್ತ ಸದಾ | ಪವನ ಮತದೊಳಿದ್ದು||6|| ದಶಮಿ ವಂದು ಏಕಾದಶಿ ಎಂಟು ತಿಳಿದು | ದ್ವಾದಶಿ ಐದು ಹ | ದಿನಾಲ್ಕು ಎಸವ ಝವಾ | ಪುಶಿಯಲ್ಲ ಇದು ಸಿದ್ಧಾ ಅಸುಯವ ಬಡದಲೇ | ಕುಶಲದಿಂದಲಿ ವ್ರತ ಚರಿಸುತ್ತಲಿ ಚನ್ನಾಗಿ ||7|| ಏಳೊಂದು ವತ್ಸರದ ಮೇಲೆ | ಎಂಟು ಹತ್ತು ಮೇಲು ವತ್ಸರ ಬಿಟ್ಟು ವಾಲಾಯ ಉಳಿದವರು | ನೀಲವರ್ಣನ ವ್ರತವಾ ಲೀಲೆಯಿಂದಲಿ ಚರಿಸಿ ||8|| ಆವಾದಾದರ ಬಿಡದಿರೀ | ಕೇವಲ ಸಾಧನವೂ | ಈ ವಾರವು ದೇವೇಶ ವಿಜಯವಿಠ್ಠಲಗೆ ಸಮರ್ಪಿಸೆ | ಸೇವಿಯ ಪಾಲಿಸಿ ಕೈವಲ್ಲ್ಯದಲಿ ಇಡುವಾ ||9||

Thoughts & Reflections

0

No reflections shared yet. Be the first to share your thoughts!

Share your thought