Bhasaka
← Back to home

ಇಂದು ಬನ್ನಿ ಇಂದಿರೇಶಾ ಇಂದುವಾರದಲಿ ಬಲು

Author: ವಿಜಯದಾಸCategory: ಶ್ರೀಕೃಷ್ಣ
ಇಂದು ಬನ್ನಿ ಇಂದಿರೇಶಾ ಇಂದುವಾರದಲಿ ಬಲು | ಅಂದದಿಂದ ಮೆರೆವನಂದವ ನೋಡಾ ಮುತ್ತಿನ ಕಿರೀಟ ಮೇಲೆ ಸುತ್ತಿದ ಲತೆ ತಳಲು | ರತ್ನಗಂಬಳಿ ಕಲ್ಲಿಯ ಬುತ್ತಿ ಪೆಗಲೂ || ತೂತ್ತುತೂರಿ ಎಂದು ಸ್ವರ | ವೆತ್ತಿ ಊದುವ ಕೊಳಲು | ಉತ್ತಮ ಶೋಕ್ಲವನು ಮೆರೆಯುತ್ತಲಿಪ್ಪುದು ||1|| ಉಂಗುರಗೂದಲು ಪುಬ್ಬು ಸಿಂಗಾಡಿ ಅಂದದಿ ಒಪ್ಪೆ | ಅಂಗಾರ ಕಂಕಣ ಮಂಗಳಾಂಗ ನಿಸ್ಸಂಗ | ರಂಗ ತುಂಗ ಮಹಿಮ ತಾರಂಗ ಅಂಗುಲಿಲಿ ರತ್ನ | ದುಂಗುರವ ಯಿಟ್ಟ ಸುಖಂಗಳ ನೋಡಾ ||2|| ಉಂಗುರವ ನಡು ಮೇಲು ಕಂಗಳ ಕುಡಿನೋಟ | ಗೋಪಾಂಗನೇರ ಮನಕೆ ಮೋಹಂಗಳ ತೋರೆ | ಅಂಗಜನ್ನೆನೆಸಿ ತಾಪಂಗಳು ವೆಗ್ಗಳದಿಂದ | ಹಂಗೀಗರಾಗೆ ನಗುವ ಗಂಗಾಜನಕ ||3|| ಲೋಕ ಬೆಲೆಗೊಂಬ ಅಲೌಕೀಕ ಮಣಿನಾಸದಲ್ಲಿ | ರಾಕಾಬ್ಜಾನಂದದಿ ಮೊಗಾನೇಕ ಲೋಕೇಳಾ | ನಾಕಾಜನಾದಿಗೆ ನಿತ್ಯ ಬೇಕೆಂದು ಜಪಿಸಲು ದೊರಕದ ದೊಂಬಲು ಬಾ ಯದುಕುಲಾಂಬರಾ||4|| ತೂಗುವ ಕುಂಡಲ ಕರ್ಣ ಶ್ರೀಗಂಧ ಪೂಸಿದ ವಕ್ಷ | ಪೂಗೊಂಚಲು ಸಣ್ಣನಾಮ ಆ ಗೆಜ್ಜೆಧ್ವನಿ | ಆಗಮನ ಸೋಲಿಸೆ ನಾನಾ ಭೋಗಾದಲ್ಲಿಯಿಪ್ಪ | ಮಧ್ವ | ಯೋಗಿಪ್ರಿಯಾ ವಿಜಯವಿಠ್ಠಲಾ ಗುಣನಿಧಿ ||5||

Thoughts & Reflections

0

No reflections shared yet. Be the first to share your thoughts!

Share your thought