Bhasaka
← Back to home

ಇಂದು ಸಾರ್ಥಕವಾಯಿತು ಎನ್ನ ಜನನಾ

Author: ವಿಜಯದಾಸCategory: ಶ್ರೀಕೃಷ್ಣ
ಇಂದು ಸಾರ್ಥಕವಾಯಿತು ಎನ್ನ ಜನನಾ ಚಂದ್ರ ಪುಷ್ಕರಣಿಯ ವಾಸ ರಂಗನ್ನ ಕಂಡು ಸುತ್ತೇಳು ಪ್ರಾಕಾರಗೋಪುರ ಮಹಾದ್ವಾರ ರತ್ನದ ಕವಾಟ ತೋರಣಗಳು ಕತ್ತಲೆ ಹರನಂತೆ ಕಣ್ಣಿಗೆ ತೋರುತಿದೆ ತುತ್ತಿಸಲಳವೆ ಅನಂತ ಜನುಮಕೆ ||1|| ಸಾಲು ಬೀದಿಗಳು ಒಂದೊಂದರ ಮಧ್ಯದಲಿ ಸಾಲು ಮಂಟಪ ಮುತ್ತಿನ ಚಪ್ಪರಾ ಕೀಲುಮಣಿಗಳಿಂದ ಬಿಗಿದ ಸೊಬಗು ಹೊಂ ಬಾಳೆಸ್ತಂಭಗಳೆಡಬಲದಲ್ಲಿ ಒಪ್ಪಲು ||2|| ಮುಂದೆ ಗರುಡಗಂಭ ಪವಳದ ಗವಾಕ್ಷಿ ಹಿಂದೆ ನೆರೆದ ಬಲು ಪರಿಯಂಗಡಿ ಸಂದಣಿಯಿಂದ ಭೂಸುರರು ಸ್ತೋತ್ರವ ಪೇಳೆ ಒಂದೊಂದು ಬಗೆಯಲ್ಲಿ ವಂದಿಸುವುದು ಕಂಡು ||3|| ಚಂದನ್ನನಿಂದೆ ಪೋಗಾಡಿದ ಸರೋವರ ಒಂದು ಸುರವನ್ನೆ ವೃಕ್ಷದಲ್ಲಿ ಮಿಂದು ಸಜ್ಜನರು ಕೈಗಳ ಮುಗಿದು ನಮೊ ಎಂದು ಕೊಂಡಾಡುವರು ವೇಗದಲ್ಲಿ ||4|| ಪ್ರಣವಾಕಾರವಾದ ವಿಮಾನ ಅದರ ಮೇಲೆ ಮಿನುಗುವ ವಾಸುದೇವಾದಿಗಳ ಮನದಣಿಯ ಕೊಂಡಾಡಿ ಮುದದಿಂದ ಪಾಡುತ್ತಾ ಫಣಿ ತಲ್ಪನಾಥ ಶ್ರೀ ಪರಮಪುರುಷನ ಕಂಡು ||5|| ಕಮನೆಯ ಮುಕುಟ ಕಸ್ತೂರಿ ತಿಲಕ ನಾಶಿಕ ಕಮಲಾಕ್ಷ ಕುಳಿರತೆರದಿ ಕದಪು ಅಮಲಗೂದಲು ಕರ್ಣ ಕುಂಡಲ ಉರದಲ್ಲಿ ರಮಣಿ ಕೌಸ್ತುಭ ಹಾರ ಪದಕ ಪಾವನ ಪಾದಾ||6|| ನಸುನಗೆ ಚತುರ್ದಶ ಲೋಕವ ಬಿಸಜ ಕರಗಳು ಭೂಷಣದಿಂದಲಿ ಬಿಸಜ ಭವನ ಪಡೆದು ನಾಭಿ ವಸನಕಟಿ ಮಿಸುಣಿಪ ವಡ್ಯಾಣ ಸರ್ವ ಲಕ್ಷಣನಾ ||7|| ಕಾಲ ಕಡಗ ಪೆಂಡೆ ಪೊಂಗೆಜ್ಜೆ ಅಂದಿಗೆ ವಾಲಾಯ ಪದತಳದಲಿ ರೇಖೆ ವಾಲಗ ಸಿರಿದೇವಿ ಪ್ರೀತಿಯಿಂದಲೆ ಮಾಡೆ ಕಾಲಕಾಲಕೆ ಸುರರು ಸಮ್ಮುಖದಲಿ ನುತಿಸೆ ||8|| ಉಭಯ ಕಾವೇರಿ ನಡುವೆಯಿದ್ದು ದಕ್ಷಿಣ ಅಭಿಮುಖವಾಗಿ ಪವಡಿಸಿದ ವಿ ಭೀಷಣದ ವರದ ರಂಗ ಮಂದಿರ ನಿಲಯಾ ವಿಬುಧೇಶ ವಿಜಯ ವಿಠ್ಠಲ ರಂಗನ ಕಂಡು||9||

Thoughts & Reflections

0

No reflections shared yet. Be the first to share your thoughts!

Share your thought