Bhasaka
← Back to home

ದಯಮಾಡೋ ರಂಗಾ

Author: ಪುರಂದರದಾಸCategory: ಶ್ರೀಕೃಷ್ಣRaaga: ಕಾಫಿTaala: ತ್ರಿತಾಲ
ದಯಮಾಡೋ ರಂಗಾ ದಯಮಾಡೋ ಕೃಷ್ಣ ದಯಮಾಡೋ ನಿನ್ನ ದಾಸ ನಾನೆಂದು || ಹಲವು ಕಾಲದಿ ನಿನ್ನ ಹಂಬಲು ಎನಗೆ | ಒಲಿದು ಪಾಲಿಸಬೇಕೊ ವಾರಿಜನಾಭ || ಇಹಪರಗತಿ ನೀನೆ ಇಂದಿರಾರಮಣ | ಸಹಾಯ ನಿನ್ನದೇ ಸದಾ ತೋರು ಕರುಣಾ || ಕರಿರಾಜವರದನೆ ಕಂದರ್ಪನಯನ | ಹರಿ ಸಾರ್ವಭೌಮ ಶ್ರೀ ಪುರಂದರವಿಟ್ಠಲ ||

Thoughts & Reflections

0

No reflections shared yet. Be the first to share your thoughts!

Share your thought