Bhasaka
← Back to home

ಇಕೋ ಈತ ವೆಂಕಟೇಶನೊ ಭವದ

Author: ವಿಜಯದಾಸCategory: ಶ್ರೀಕೃಷ್ಣ
ಇಕೋ ಈತ ವೆಂಕಟೇಶನೊ | ಭವದ | ಸಿಕ್ಕು ಬಿಡಿಸಿ ನೆನದವರಿಗೆ ಸಿಕ್ಕಿ ಮನದಿಂದಗಲದಿಪ್ಪಾ ಕರುಣ ಅರುಣ ಕಿರಣ ಪೋಲುವ | ಚರಣ ಧರಣಿ ತರುಣಿ ಸ್ಮರಿಸಿ | ಕರುಣಗಡಲಾ | ಧರಣಿಯಿಂದ ಉದ್ಧರಣೆ ಮಾಡಿದೆ ಪರಣನೀತ ||1|| ಮಂಡಿಯ ಮಂಡನ | ಕುಂಡಲ ಕಾಂತಿ | ಗಂಡ ಸ್ಥಳದಲಿ ಮಿರುಗೆ ತುಲಸಿ | ದಂಡೆ ಕೌಸ್ತುಭ ಭೂಷಣ ಕಾಲ | ಪೆಂಡೆಯಿಟ್ಟು ನಂದನೀತ ||2|| ತಂ (ತು) ವಾಹನ ಆ ಖಂಡಲ ಇಕ್ಷುಕೋ | ದಂಡ ಪರಮೇಷ್ಠಿ | ತೊಂಡರ ನಲಿದು ಕೊಂಡಾಡೆ ಚಂದಿರ ಮಂಡಲದೊಳು ಉ| ದ್ದಂಡನಾಗಿಯಿಪ್ಪಾ | ಪುಂಡ ದೈವನೀತ ||3|| ಪಂಜಿನಸಾಲು ಪರಂಜಳಿ ವಾದ್ಯ ವಿ | ರಂಜಿಸಲು e್ಞÁನ | ಪುಂಜ ನಾರದ ಜಯ ಜಯ ಪೇಳಲು | ಕಂಜಲೋಚನ ನಿರಂಜನ ದಾನವ ಭಂಜನ ಈಶಾ ||4|| ಕರದ ಜನಕೆ ಸುರಧೇನು ಇದು | ನಿರುತದಲ್ಲಿ ಪೊರೆವ ಭಕ್ತರ | ಕರಿಯ ಕಾಯ್ದ ವಿಜಯವಿಠ್ಠಲ | ಪರಮ ಪುರುಷ ತಿರುಮಲನೀತ ||5||

Thoughts & Reflections

0

No reflections shared yet. Be the first to share your thoughts!

Share your thought