Bhasaka
← Back to home

ಇದು ನಿನಗೆ ಬಲು ಚಂದವಾಗಿದೇನೋ

Author: ವಿಜಯದಾಸCategory: ಶ್ರೀಕೃಷ್ಣ
ಇದು ನಿನಗೆ ಬಲು ಚಂದವಾಗಿದೇನೋ | ಬಾದರಾಯಣನ ಮೆಚ್ಚಿಸಿ ಸೇವೆ ಮಾಡಬೇ | ಕಾದರೂ ಮತ್ತಾವ ಪರಿಯಿಲ್ಲವೇ | ಈ ಧರೆ ಮನುಜರಿಗೆ ಆವಾವ ಕಾಲಕ್ಕೆ ಭೋದವಾಗದಂತೆ ಇದ್ದದ್ದೇನು ಬಗೆ ||1|| ಸಂಪುಟಾಕಾರವನು ಧರಿಸಿ ಅಲಂಕಾರ | ಸಂಪತ್ತಿನಿಂದ ಯತಿಗಳ ಕೈಯ್ಯಲಿ | ಸೊಂಪಾಗಿ ಮಿಗೆ ಪೂಜೆ ಕೊಳುತ ಪೊಗಳಿದ ಜನಕೆ | ತಂಪಾಗಿ ಗುರು ಶ್ರೀ ಮದಾಚಾಯರ್ಸ ||2|| ಪೆಟ್ಟಿಗೆಯಂದದಲಿ ಒಪ್ಪುವನೆಂದದಕೆ | ದಿಟ್ಟವಾಯಿತು ದಾಸರು ನುಡಿದುದು | ವಿಷ್ಣುತೀರ್ಥರಿಂದ ಆರಿಸಿ ಬಂದ | ವಿಜಯವಿಠ್ಠಲ ವೇದ | ವ್ಯಾಸನಂಘ್ರಿವಾರಿಜ ಮಧುಪಾ||3||

Thoughts & Reflections

0

No reflections shared yet. Be the first to share your thoughts!

Share your thought