Bhasaka
← Back to home

ಇದೇ ಭಕುತಿ ಮತಿಗೆ ಮುಕುತಿ

Author: ವಿಜಯದಾಸCategory: ಇತರೆ
ಇದೇ ಭಕುತಿ ಮತಿಗೆ ಮುಕುತಿ | ಇದಕ್ಕಧಿಕವಾಗಿಪ್ಪ ವಿಧಿಗಳೆಲ್ಲಿಯಿಲ್ಲಾ ರತುನ ಗರ್ಭದೊಳಗೆ ತಿಳಿ | ರತುನ ಸಮಕ್ಷೇತ್ರಗಳಿಗೆ | ರತುನವೆನ್ನಿ ಯತಿವಂಶ | ರತುನ ಮಧ್ವಮುನಿಮಾಡಿದಾ ||1|| ಪದ ಜೀವಸ್ತರಿಗದೆ ಪಾ | ಪ ಜನರು ಕೃಷ್ಣರಾಯನ ಪಾದವ ನೋಡಿ ನಿತ್ಯಾ | ಸಾಧನಿ ಮನ ಮಾಡಿರಯ್ಯಾ ||2|| ಏಳು ಒಂದು ಮಠದ ಲೋಕರಂಸೆ ಸದನವೆನ್ನಿ | ಪೇಳಲೇನು ಅವರೇ ಯಿಲ್ಲಿ ಊಳಿಗವ ಮಾಡುತ್ತಿಪ್ಪರು ||3|| ಮೇರೊ ಪರ್ವತ ತುಲ್ಯವಿದೆ | ವಾರಿಜನೆ ಮಧ್ವರಾಯ | ಈ ರಜತ ಪೀಠವೆ ಮಂದಿರ ಶತಕೋಟಿ ಎನ್ನೀ||4|| ಮೆರೆವ ಮಧ್ವತೀರ್ಥ ಬಾಹಿರ | ವರಣ ಉದಕವೆನ್ನಿ ಇಲ್ಲಿ | ಚರಿಸುವಂಥ ಸುಗುಣ ತೃಣಾ ದ್ಯರು ಮುಕುತಿ ಯೋಗ್ಯರಹುದು||5|| ಉಡಪಿ ಯಾತ್ರೆ ಮಾಡಿದವನು | ಪೊಡವಿ ತುಂಬ ಯಾತ್ರೆ | ಬಿಡದೆ ಚರಿಸಿದವನೆ ಎಂದು | ಮೃಡನು ಇಲ್ಲಿ ಸಾರುತಿಪ್ಪಾ ||6|| ಉಬ್ಬಿ ಸರ್ವ ಇಂದ್ರಿಯಂಗಳಾ | ಹಬ್ಬವಾಗಿ ಸುಖಿಪದಕೆ | ಊರ್ಬಿಯೊಳಗೆ ಉಡುಪಿ ಯಾತ್ರೆ | ಅಬ್ಬದಲೆ ದೊರಕದಯ್ಯಾ ||7|| ಲಿಂಗ ದೇಹ ಭಂಗವಾಗಿ ಹಿಂಗಿ ಪೋಗದಕೆ ಇದೇ | ಅಂಗವಲ್ಲದೆ ಬೇರೆ ಇಲ್ಲ | ರಂಗ ಸುಲಭಸಾಧ್ಯಾವಾಹಾ ||8|| ನೂರು ಕಲ್ಪಧರ್ಮ ಮಾರನಯ್ಯ ವಿಜಯವಿಠ್ಠಲನ | ಪ್ರೇರಣೆಯಾಗಿ ಉಡುಪಿಗೊಂದು ಸಾರಿ ತಂದು ಕೊಡುವಾ||9||

Thoughts & Reflections

0

No reflections shared yet. Be the first to share your thoughts!

Share your thought