Bhasaka
← Back to home

ಇದೇ ರಾಮನಿಧಿ ನೋಡು ಎದುರಿಗಿರುತಿರೆ

Author: ವಿಜಯದಾಸCategory: ಶ್ರೀರಾಮ
ಇದೇ ರಾಮನಿಧಿ ನೋಡು ಎದುರಿಗಿರುತಿರೆ ಹೃದಯವೆಂಬೊ ಸದನದಲ್ಲಿ ಕದವು ತೆಗೆದಿದೆ ದಾರಿಯಲ್ಲಿ ಆರು ಛತ್ರ ಭೂರಿ ಭೋಜನ ಊರೊಳಲ್ಲಿ ಪ್ರಣವ ಶಬ್ದ ಭೋರೆಗುಟ್ಟುತ ನೂರು ಕೋಟಿ ಸೂರ್ಯ ಕಿರಣ ತೋರುವಾ ಪ್ರಭೆ ಸೂರೆ ಮಾಡಿಕೊಳ್ಳಿರೋ ಪಾರವಿಲ್ಲದಾ ||1|| ಅಷ್ಟದಳದ ಮಂಟಪದ ಪೆಟ್ಟಿಗೆಯಲೀ ಸೃಷ್ಟಿಗೊಡೆಯ ಹರಿಯ ನಾಮ ಅಂಕಿತವಾದ ಕಟ್ಟಳೆಯಿಲ್ಲದ ನಾಣ್ಯಗಳನು ಕಟ್ಟರೀಸಿದೆ ಹುಟ್ಟ ತಿರುಕರೆಲ್ಲ ಬಂದು ಕಟ್ಟಕೊಳ್ಳಿರೋ ||2|| ಅಂಕೆ ಮಾಡುವರಿಲ್ಲವಿದಕೆ ಶಂಕೆ ಬ್ಯಾಡಿರೋ ಅ- ಹಂಕೃತಿಯ ತೊರೆದು ಕಾಲ್ಗೆ ಗೆಜ್ಜೆ ಕಟ್ಟಿರೋ ಶಂಖ ತಾಳ ಮದ್ದಳೆಯು ಝೇಂಕೃತಿಯಿಂದಾ ವೆಂಕಟಾಚಲ ನಿಲಯಕಾಯೊ ವಿಜಯವಿಠ್ಠಲ ||3||

Thoughts & Reflections

0

No reflections shared yet. Be the first to share your thoughts!

Share your thought