Bhasaka
← Back to home

ಇದೇ ಸಮಯ ಹರಿಯೇ

Author: ವಿಜಯದಾಸCategory: ಶ್ರೀಕೃಷ್ಣ
ಇದೇ ಸಮಯ ಹರಿಯೇ ಇದೇ ಸಮಯ ನಿನ್ನ ಪದ ಕಮಲ ತೋರಿ ಸದಾ | ಬಿಡದೆ ಎನ್ನ ಮುದದಿ ಪೊರೆವುದಕೆ ಅ.ಪ ನಾನಾ ಯೋನಿಯಲಿ ಬಂದು ಜ್ಞಾನ ದುರ್ಲಭನಾಗಿ | ಹೀನನಾದವಗೆ ಸುಜ್ಞಾನ ಪಾಲಿಸುವುದಕೆ ||1|| ಆಶಾಪಾಶಕೆ ಸಿಲುಕಿ ಶ್ರೀಶನ ಮರೆತೆನೋ | ಲೇಸು ದಾರಿಯ ತೋರಿ ದಾಸನ ಕಾಯುವುದಕೆ ||2|| ಸಂತರ ಸಂಗವ ಸಂತತ ಪಾಲಿಸಿ ಅಂತರಂಗದಿ ನಿನ್ನ ಚಿಂತನೆ ಕೊಡುವುದಕೆ ||3|| ಹಿಂದಿನ ಸುಕೃತದಿ ಬಂದೆ ಭೂಸುರನಾಗಿ | ಮುಂದಿನ ಪದಕ್ಕಾಗಿ ಕುಂದದೆ ಸಲಹುವುದಕೆ ||4|| ಶ್ರೀ ಪತಿ ವಿಜಯವಿಠ್ಠಲ ವೆಂಕಟ | ತಾಪವ ಕಳೆದೆನ್ನ ಕಾಪಾಡುವುದಕೆ ||5||

Thoughts & Reflections

0

No reflections shared yet. Be the first to share your thoughts!

Share your thought