Bhasaka
← Back to home

ಈ ಪರಿಯಲಿ ಸಲೆ ಸೇವೆಯನು

Author: ವಿಜಯದಾಸCategory: ಶ್ರೀಕೃಷ್ಣ
ಈ ಪರಿಯಲಿ ಸಲೆ ಸೇವೆಯನು ಕೊಡು ಕಂಡ್ಯಾ ಹರಿಯೇ | ಶ್ರೀಪತಿ ಉತ್ತಮರ ಸಂಗತಿಯಲೆನ್ನಯಿಟ್ಟು ಬಂದು ಕುಳ್ಳಿರುವಲ್ಲಿ ಸಿಂಹಾಸನನಾಗುವೆನು | ನಿಂದಲ್ಲಿ ಮೆಟ್ಟುವ ಹಾವಿಗೆಯಾಗುವೆ | ಮಿಂದ ಬಚ್ಚಲಿಗೆ ಹಚ್ಚಿದ ಶಿಲೆಯಾಗುವೆ | ಗಂಧವಾಗುವೆ ನಿನ್ನ ಅಂಗಾಲಿಗೆ ||1|| ಉಂಬಲ್ಲಿ ಬಿದ್ದ ಎಂಜಲ ತಿಂದು ಬದುಕುವೆ | ಅಂಬು ಶೀತಳವಾಗಿ ಕರವ ತೊಳಿವೆ | ಅಂಬುಜ ಕುಸುಮವಾಗಿ ಹಾಸಿಕೆಯಾಗುವೆ ಬಾಯ | ದೊಂಬಲಿಗೆ ಕರವಡ್ಡಿ ಛಲ ಹೊರುವೆ||2|| ಪವಡಿಸುವ ಮನೆಯೊಳಗೆ ಸೂಜ್ಯೋತಿಯಾಗುವೆ | ಪವಳ ಮಂಚದ ನಾಲ್ಕು ಕಾಲಾಗುವೆ | ಪವನ ರಿಪುಗಮನ ಸಿರಿ ವಿಜಯವಿಠ್ಠಲ | ಜವನ ದೂತರನೊದದು ಸುಶುಚಿಯಾಗುವೆ||3||

Thoughts & Reflections

0

No reflections shared yet. Be the first to share your thoughts!

Share your thought