Bhasaka
← Back to home

ಈ ಮಾತುರ ನೀಯದಿದ್ದರೆ ನಿನ್ನ

Author: ವಿಜಯದಾಸCategory: ವೈರಾಗ್ಯ
ಈ ಮಾತುರ ನೀಯದಿದ್ದರೆ ನಿನ್ನ | ಧಾಮದಲ್ಲಿಗೆ ಪೋಗಿ ಸೇರಿ ಸುಖಿಪದೆಂತೋ ಹುಟ್ಟಿದಾರಭ್ಯದಿ ಹೊಟ್ಟಿ ಬಟ್ಟಿಯಲಿಂದ | ಕಷ್ಟ ಬಟ್ಟೆನೆಂದು ಹೇಳಲಿಲ್ಲಾ | ಸೃಷ್ಟೇಶ ಕಾಡುವ ಅಷ್ಟ್ಟ ಮಹಾಮದಗಳ ನಷ್ಟಗೊಳಿಸಿ ನಿನ್ನ | ನಿಷ್ಟಿಲಿಡೆಂದೆಲ್ಲದೆ ||1|| ಸತಿ ಸುತರಿಗೆ ಯೇನೋ | ಗತಿ ಗೋತ್ರವಿಲ್ಲೆಂದು | ಸತತ ನಿನ್ನ ಕೇಳಿ ದಣಿಸಿಲಿಲ್ಲಾ | ಪತಿತ ಪಾವನ ಎನಗೆ ಗತಿಯಾಗುವುದಕೆ | ಸುಪಥವನೆ ತೋರುವ | ಮತಿಕೊಡೆಂದೆನಲ್ಲದೆ||2|| ಕರುಣಿ ಬೇಡಿಕೊಂಬೆ | ಉರು ಕಾಲದಲಿ ನಿನ್ನ | ಶರಣರ ಸಂಗತಿಲೆನ್ನ ಇಟ್ಟು | ಪರಮ ಶುದ್ಧನ ಮಾಡಿ ವಿಜಯವಿಠ್ಠಲ ನಿನ್ನ | ಚರಣಸೇವೆ ನಿರಂತರ ಕೊಡೆಂದೆನಲ್ಲದೆ||3||

Thoughts & Reflections

0

No reflections shared yet. Be the first to share your thoughts!

Share your thought