Bhasaka
← Back to home

ಈ ವೈಷ್ಣವ ಜನುಮ ಸಫಲವಿಂದು

Author: ವಿಜಯದಾಸCategory: ಶ್ರೀಕೃಷ್ಣ
ಈ ವೈಷ್ಣವ ಜನುಮ ಸಫಲವಿಂದು | ಈ ಉಡುಪಿ ಯಾತ್ರಿಗಭಿಮುಖವಾದುದು ಮನೋವಾಕ್ಕಾಯ ಕರ್ಮಗಳು ಬಲುಪರಿ ಇರಲು | ಮನುಜ ಪೋಗುವೆನೆಂದು ಒಮ್ಮೆ | ನೆನೆಸಿದ ಕ್ಷಣದಲ್ಲಿ ನಾಕವಾಗೋವು ಸು ತ್ತನು ಸುತ್ತಿಸುವ ಭವ ವನಧಿಗೆ ಇದೇ ಮೂಲ ||1|| ದೇಶದೊಳಗುಳ್ಳ ನಾನಾ ಯಾತ್ರೆ ತೀರಥಾ | ಏಸುಬಾರಿ ಪೋಗಿ ಬರಲಿ ಉಂಟೆ | ಈ ಸುಲಭ ಯಾತ್ರೆ ಕಂಡವರಿಗೆ ದೊರಿಯದು | ಲೇಸಾಗಿ ಕೇಳುವದು ಕುತ್ಸಿತ ಭಾವನೆ ಬಿಟ್ಟು ||2|| ಕೃಷ್ಣರಾಯನ ದರುಶನಕೆ ಮನಮಾಡಿದ | ಶಿಷ್ಟಾಚಾರಗೆ ಲಿಂಗಕಾಯ ಭಂಗಾ | ದಿಟ್ಟ ಮೂರುತಿ ವಿಜಯವಿಠ್ಠಲ ಕರುಣಿ ಜ್ಞಾನ | ಕೊಟ್ಟುಪಾಲಿಸುವ ಬಲು ಮೂರ್ಖರಾದರೂ ಸಿದ್ಧ||3||

Thoughts & Reflections

0

No reflections shared yet. Be the first to share your thoughts!

Share your thought