Bhasaka
← Back to home

ಈ ಸೊಬಗು ಇನ್ನಾವ ಕ್ಷೇತ್ರದಲಿ ಕಾಣೆನಾ ಇಲ್ಲಿ

Author: ವಿಜಯದಾಸCategory: ಶ್ರೀಕೃಷ್ಣ
ಈ ಸೊಬಗು ಇನ್ನಾವ ಕ್ಷೇತ್ರದಲಿ ಕಾಣೆನಾ ಇಲ್ಲಿ | ವಾಸುದೇವ ಮುನಿಯಿದ್ದ ಕಾರಣ ರಾಜಧಾನಿಯ ನೋಡೆ ಇಂದ್ರಭವನಕೆ ಮೇಲು | ತೇಜದಲಿ ನೋಡೆ ಸೂರ್ಯನದೆ ಸೋಲು || ಪೂಜೆದಲಿ ನೋಡೆ ಸರ್ವ ಧರಣಿಗೆ ಮೇಲು | ಭೋಜನದಲಿ ನೋಡೆ ಅಮೃತಕೆ ಮೇಲು ||1|| ಉತ್ಸಾಹದಲಿ ನೋಡೆ ನಹಿ ಪ್ರತಿ ನಹಿ ಪ್ರತಿ | ಸತ್ಸಂಗತಿಯ ನೋಡೆ ಬುಧ ಸಂಗತಿ || ಸುಚರಿತೆಯ ನೋಡೆ ಶುದ್ಧ ಸತ್ವದ ನೀತಿ | ಮತ್ಸರ ಮೆರೆದು ನೋಡೆ ಇಲ್ಲೆ ಮುಕುತಿ ||2|| ಓಲಗದಲಿ ನೋಡೆ ಸತ್ಯಲೋಕಕೆ ಸಮ | ಪೇಳುವ ಕೀರ್ತನೆ ನೋಡು ವೇದಸ್ತೋಮ || ಬಾಲ ಉಡುಪಿಯ ಕೃಷ್ಣ ವಿಜಯವಿಠ್ಠಲರೇಯನ | ತಿಳಿದ ಮಾನವಗೆ ಫಲವು ನಿಷ್ಕಾಮಾ||3||

Thoughts & Reflections

0

No reflections shared yet. Be the first to share your thoughts!

Share your thought