Bhasaka
← Back to home

ಈತನೀಗ ಪ್ರಣವ ಪಾದ್ಯನೊ

Author: ವಿಜಯದಾಸCategory: ಶ್ರೀಕೃಷ್ಣ
ಈತನೀಗ ಪ್ರಣವ ಪಾದ್ಯನೊ | ಭೂತ ಪ್ರೇತ ಪ್ರಮಥ ತತಿಗೆ | ನಾಥನೆನಿಪ ನಮಗೆ ನಿರುತ | ವಾಕನೊಳಗೆ ಹರಿಯ ತೋರುವ ಗಜದನುಜ ವಿನಾಶನೀತ | ಗಜವದನನ ಪೆತ್ತನೀತ | ಗಜನ ಸದದನೀತ ಪೆತ್ತಂ | ಗಜನ ಗೆದ್ದ ಗಂಭೀರನೀತ | ಗಜರಿಪುರಥ ರಮಣನೀತಾ ನಂ | ಗಜಮಾರಗೊಲಿದನೀತ | ಗಜ ವರದನ ಭಕ್ತರಘವೆಂಬೊ | ಗಜಕೆ ಕೇಸರಿಯಾಗಿಪ್ಪನೀತಾ ||1|| ದ್ವಿಜರಾಜ ಜುಟನೀತಸೋತ್ತಮ | ದ್ವಿಜಗೆ ಪಾಲಿಪನೀತ ಸತತಾ | ದ್ವಿಜ ಪನ್ನಗನ್ನ ಸಮಗುಣನೀತಾ | ದ್ವಿಜ ಕುಲದಲ್ಲಿ ಉದ್ಭವನೀತ | ದ್ವಿಜನ ಶಾಪವ ಕೈಕೊಂಡನೀತ | ದ್ವಿಜ ಭೂಷಣ ಯಾಗದಲಿ ಸೂರ್ಯನ | ಧ್ವಜವ ಕಿತ್ತಿದನೀತ ಕೈಲಾಸ | ದ್ವಿಜವಾಗಿವುಳ್ಳ ಉಗ್ರೇಶನೀತ||2|| ತ್ರಿಗುಣಾಕಾರ ನೀತ ಮೂರು | ಜಗವದಲ್ಲಣನೀತ ಮೇರು | ನಗಚಾಪನೀತ ನಾರಾಯಣಾಸ್ತ್ರದಿ | ನಗರನುರುಪಿ ಬಿಟ್ಟನೀತ | ಬಗೆಬಗೆಯ ಜೀವಿಗಳಿಗೆ ಬಿಡದೆ | ಅಗಣಿತ ಭೋಗ ಪ್ರದಾತನೀತ | ಮೃಗಲಾಂಛನದ ಮೊಗನಗೆ ಈತ | ನಿಗಮಾಶ್ರವದಗಧಿಕನೀತಾ ||3|| ಭಸುವ ರಾವಣ ಮಾಗಧ ಕಶ್ಯಪ | ಅಸುರಗಣಕೆ ವರವಿತ್ತನೀತ | ಪಶುವದನ ಪರಮೇಶ್ವರನೀತ | ವಿಷವ ಭಂಜನಭವ ಶಿವನೀತ | ಬಿಸಿಜ ಸಂಭವ ನಂದನನೀತ | ಅಸಮವೀರ ವೈಷ್ಣವನೀತ | ವಸುಧಿಯೊಳಗೆ ಶರಣ ಜನಕೆ | ವಶವಾಗಿಯಿಪ್ಪ ಉಗ್ರೇಶನೀತಾ ||4|| ಹೇಮಕೂಟಾದ್ರಿ ನಿಲಯನೀತ | ರಾಮದೇವ ವಾಸವಂದ್ಯ | ಸೋಮವರ್ಣನೀತ ಸಕಲ | ಕಾಮಿತಾರ್ಥವ ಕೊಡುವನೀತ | ಯಾಮ ಯಾಮಕೆ ಮನದೊಳು ನಿಂದು | ಕ್ಷೇಮ ಮಾರ್ಗಕ್ಕೆ ಪ್ರೇರಕನೀತ | ರಾಮ ವಿಜಯವಿಠ್ಠಲನಂಘ್ರಿ | ನಾಮನೆನಿಸಿ ಕೊಂಡಾಡುವನೀತಾ||5||

Thoughts & Reflections

0

No reflections shared yet. Be the first to share your thoughts!

Share your thought