Bhasaka
← Back to home

ಈತನೀಗ ಭಾರತೀಶನು ತನ್ನ ಪ್ರೀತಿಸುವರ

Author: ವಿಜಯದಾಸCategory: ಶ್ರೀಕೃಷ್ಣ
ಈತನೀಗ ಭಾರತೀಶನು ತನ್ನ ಪ್ರೀತಿಸುವರ | ಮನದ ಮಾತು ಸಲಿಸಿ ಮುಕುತಿ ಈವ ಶರಧಿ ಜಿಗಿದು ಹಾರಿ ಲಂಕಾಪುರವ ಶೋಧಿಸಿ | ಹರಿಯ ರಾಣಿಗೆ ಕುರುಹನಿತ್ತು ಮರಗಳುರುಹಿ || ಮುರಿದು ಧರೆಗೆ ವರಿಸಿದಾತಾ ಅಪ ಧುರದೊಳಕ್ಷನ ಹರಣವಳಿದು | ಗುರುವರ್ಹತ್ತುಶಿರನ ಜರಿದು || ಸರ್ರನೆ ನಗರ ಉರುಪಿ ಮರಳಿ | ಹರಿಯ ಚರಣಕ್ಕೆರಗಿದಾತಾ ||1|| ಕುರುನಿಕರ ಕರುಬಿ ಬೊ-| ಬ್ಬಿರಿದು ನಿಂದುರವಣಿಸಿ ಎದುರಾ-|| ದರಿಗಳ ಶಿರ ತರಿದು ತಳೋ-| ದರಿಯ ಹರುಷಬಡಿಸಿದಾತಾ||2|| ಕರಿಯ ತೆರದಿ ದುಷ್ಟ ಸಂಕರನು | ತಿರುಗಲವನ ಮುರಿದು ಮತ್ತೆ || ಮರುತಮತದ ಬಿರುದನೆತ್ತಿ - | ಪರನೆ ವಿಜಯವಿಠ್ಠಲನೆಂದಾ ||3||

Thoughts & Reflections

0

No reflections shared yet. Be the first to share your thoughts!

Share your thought