Bhasaka
← Back to home

ಈಶಾ ಕೈಲಾಸವಾಸಾ

Author: ವಿಜಯದಾಸCategory: ಶ್ರೀಶಿವ
ಈಶಾ ಕೈಲಾಸವಾಸಾ | ಕಾಶೀನಗರಾಧೀಶಾ | ಶೇಷಭೂಷಣ | ಗಿರೀಶಾ | ವಿಶ್ವೇಶ ಚಿತ್ತವಾಸಾ ಶಿವಸಿದ್ಧ ಸಾಧ್ಯ ಸೇವ್ಯಾ | ಭವವನಾಶವ ದಿವ್ಯ | ಭವಮೂರ್ತಿ ಕೀರ್ತಿಭವ್ಯಾ | ಕವಿ ಪ್ರಿಯ ಜ್ಞಾನ ದ್ರವ್ಯಾ ಹಾ || ಶಿವ ಓಂ ನಮಃ ಶಿವ | ಸವಚರಣ ನೋಡುವ | ಪವಿತ್ರ ಚಿತ್ತವ ಕೊಡು | ಧವಳ ಗಂಗಾಧರನೇ ||1|| ಸತಿನಾಥ ಭೂತ ಪ್ರೀತ | ಸತತ ಸದ್ಗುಣ ವ್ರಾತ | ಪತಿತ ಪಾವನ ತಾತ | ಕೃತುವೈ ಪದ್ಮಜಾತ ಹಾ || ಕ್ಷಿತಿಯೊಳು ನೀಲಲೋಹಿತ | ನೀನೇ ಗುರುವೆಂದು | ತುತಿಪ ಗತಿಗೆ ರಘು | ಪತಿನಾಮ ಎನಗೀಯೋ ||2|| ತ್ರಯನೇತ್ರ ಚಿತ್ರಗಾತ್ರ | ನಯ ನಮಿಪರ ಮಿತ್ರ ಜಯ | ಜಯಾಮರ ಸ್ತೋತ್ರ | ದಯಮಾಡೋ ಪುಣ್ಯ ಪಾತ್ರಾ ಹಾ || ಭಯ ನಿವಾರಣ ಸಿರಿ | ವಿಜಯವಿಠ್ಠಲನ | ಭಕುತಿಯ ಕೊಡು ಅತಿ | ಶಯದಿ ಪಿನಾಕೀಶಾ ||3||

Thoughts & Reflections

0

No reflections shared yet. Be the first to share your thoughts!

Share your thought