Bhasaka
← Back to home

ಉದರ ಪೂರ್ತಿಯ ಕೊಡದಿರು ಉದಧಿಶಯನ

Author: ವಿಜಯದಾಸCategory: ಶ್ರೀಕೃಷ್ಣ
ಉದರ ಪೂರ್ತಿಯ ಕೊಡದಿರು ಉದಧಿಶಯನ ಮುದದಿ ನಿನ್ನನು ನೆನೆದು ಮಲಗುವೆನೊ ಸುಖದಿ ಮುದದಿ ನಿನ್ನ ಚರಣವನು ಸ್ಮರಿಸುವುದು | ಪರಿಹಾರವು ಬಹು ಗರ್ವ ಹೆಚ್ಚುವುದು ಎನಗೆ | ಅರವಿಂದನಾಭ ಹರಿ ವರವಿದೆ ನಿನ್ನ ಕೇಳ್ವೆ | ಪರಿಹಾಸ್ಯ ನುಡಿಯಲ್ಲ ಪರಮ ಪಾವನಗೆ ||1|| ತನುಮನವು ನಿನ್ನ ವಿಷಯಕ್ಕೆರಗಲಿ | ಅನುಮಾನವಿದ್ದ ಪರಿಯೆಲ್ಲ ತೊಲಗಿ || ವನಜಸಂಭವನೈಯ್ಯ ವೈಕುಂಠಪತಿ ನಿನಗೆ | ಅನವರತ ದೊರೆ ಎಂಬೊ | ಘನತೆ ತಪ್ಪದೆ ಇರಲಿ||2|| ಗಜಮದದಿ ಕಂಗೆಟ್ಟ ಪರಿಯನ್ನ ಮಾಡದೇ || ಅಜಮಿಳಗೆ ಒಲಿದಂತೆ ಎನಗೆ ವೊಲಿದೂ || ಸುಜನ ರಕ್ಷಕನೆಂಬೊ ಬಿರುದು ಬೇಕಾದರೆ | ನಿಜವಾಗಿ ದಯಮಾಡೊ ವಿಜಯವಿಠ್ಠಲನೇ||3||

Thoughts & Reflections

0

No reflections shared yet. Be the first to share your thoughts!

Share your thought