Bhasaka
← Back to home

ದರುಶನ ನೀಡೆನಗೆ ತಾಯಿ

Author: ಸ್ವಾಮಿ ಹರ್ಷಾನಂದCategory: ಶ್ರೀಶಾರದಾದೇವಿRaaga: ಕಾಫಿTaala: ತ್ರಿತಾಲ
ದರುಶನ ನೀಡೆನಗೆ ತಾಯಿ | ಶಾರದೇಶ್ವರಿ ವರದೇ ಶುಭದೇ ॥ ದೀನೋದ್ಧರಣಕೆ ನಿನ್ನವತರಣ | ನನಗೇ ಏಕೀ ದೂರೀಕರಣ || ದಿನಗಳು ಉರುಳಲು ಆಯುರ್ನಾಶ | ನನ್ನಿಯ ತ್ಯಜಿಸಲು ತಾಪದ ಪಾಶ || ಜ್ಞಾನದಿಂ ಭಕ್ತಿಯಿಂ ಮೋಕ್ಷವು ಬಪ್ಪುದೆ | ನಿನ್ನಯ ಪಾದದಿ ಶರಣವೆ ಸಾಲದೆ || ಎಂದಾಗುವುದು ಜನನಿ ಕೃಪೆಯು ಅಂದೇ ನನಗೆ ವಿಮೋಚನೆಯು ||

Thoughts & Reflections

0

No reflections shared yet. Be the first to share your thoughts!

Share your thought