Bhasaka
← Back to home

ಉದ್ದರುಸುವದೆನ್ನ ಉದಧಿಶಯನ

Author: ವಿಜಯದಾಸCategory: ಶ್ರೀಕೃಷ್ಣ
ಉದ್ದರುಸುವದೆನ್ನ ಉದಧಿಶಯನ | ಬಿದ್ದೆ ನಿನ್ನಯ ಪಾದ | ಪದ್ಮದ್ವಯಕೆಯಿಂದು ಅಂದು ನೀ ಪೇಳಿದಂದಲಿ ತೀರ್ಥಯಾತ್ರೆ | ನಿಂದರದೆ ಸಂಚರಿಸಿ ಪುಣ್ಯವೆಲ್ಲಾ | ತಂದು ನಿನಗರ್ಪಿಸಿದೆ ಕೈ ಕೊಂಡು | ಮುಂದೆ ಎನ್ನಗೊಂದು ದಾರಿಯ ತೋರು ತಡಮಾಡದಲೆ ದೇವಾ ||1|| ಯಾತರವ ನಾನು ನರಮನೆ ಗಾಯಕರ ದೂತರೆಂಜಲನುಂಡು ಬೆಳದ ನರನೋ || ನೋತ ಫಲವಾವದೊ ನೀನೆ ಬಲ್ಲೆಯಾ ಜೀಯಾ | ಮಾತು ಮಾತಿಗೆ ಹಿಗ್ಗಿ ನಗುವ ಚನ್ನಿಗರಾಯಾ||2|| ಇಷ್ಟೆನ್ನ ಮನದ ಭೀಷ್ಟೆ ಒಂದೆ ವುಂಟು | ಕೃಷ್ಣಾ ಸ್ನಾನ ಕೃಷ್ಣ ಸಂದರುಶನಾ | ಕೊಟ್ಟು ಕೇವಲವಾಗಿ ನಿನ್ನಂಘ್ರಿಯಲಿ ರತಿ | ಇಟ್ಟು ಭಜಿಸುವಂತೆ ಭಾಗ್ಯವನು ಕೊಡೊವೇಗಾ||3|| ಏನು ಕಡಿಮೆ ನೀನು ಒಲಿದರಾದಡೆ ರಾಮ | ಧೇನು ತರುಮಣಿ ಬಾರದೆ ನಿಲ್ಲವೇ || ಶ್ರೀನಿವಾಸನೆ ನಿನ್ನ | ನಂಬಿದ ಪಾಪಿಗೆ ಹಾನಿಯಲ್ಲದೆ ಲೇಶ ಸುಖವು ತೋರದು ದೇವಾ ||4|| ವೆಂಕಟಗಿರವಾಸಾ ವೇದ ವಂದಿತ ಚರಣಾ | ಶಂಖ ಚಕ್ರಪಾಣಿ ಕರುಣಾಕರಾ | ಶಂಖಾಣ ನೃಪವರದ ವಿಜಯವಿಠ್ಠಲ ತಿಮ್ಮ ಅಂಕದ ಮೇಲಾಡುವ ಬಾಲನೆಂದು ಬಿಡದೆ ||5||

Thoughts & Reflections

0

No reflections shared yet. Be the first to share your thoughts!

Share your thought