Bhasaka
← Back to home

ಎಂತಹದೋ ನಿನ್ನ ಸಂದುರಶನಾ

Author: ವಿಜಯದಾಸCategory: ಶ್ರೀಕೃಷ್ಣ
ಎಂತಹದೋ ನಿನ್ನ ಸಂದುರಶನಾ | ಕಂತುವಿನ ಜನಕ ಉಡಪಿ ಕೃಷ್ಣರಾಯಾ ಪರರ ಓದನ ತಿಂದೆ | ಪರರ ದ್ರವ್ಯದ ತಂದೆ | ಪರ ಸತಿಯರಿಗೆ ನೊಂದೆ | ಗುರು ಹಿರಿಯರ ನಿಂದೆ | ಹಿರದಾಗಾಡಿದೆ ಮುಂದೆ | ಬರುತಿಪ್ಪ ಪಾಪದಿಂದೆ | ಒಂದೆ ಪೋಯಿತು ವಂದೆ ಪರಿಯಾಗಿ ಈ ಬಂದೆ | ಅರುಹು ತೊರದೆ ಬಂದೆ | ಕರುಣಿಸು ಜಗದ ತಂದೆ ||1|| ಸುಜನರ ಗುಣವ ಹಳಿದೆ | ಕುಜನರ ಸಂಗದಲಿ ಬೆಳಿದೆ | ಭಜನೆಗೆಟ್ಟು ಸುಳಿದೆ | ಪ್ರಜರನು ಪೊಗಳಿದೆ | ವೃಜ ಪುಣ್ಯಕೋಶ ಕಳಿದೆ | ಋಜುಮಾರ್ಗವ ತೊರದುಳಿದೆ | ರಜನಿಚರ ಮತಿಗಳಿದೆ | ವಿಜಯ ವಾರ್ತೆಗೆ ಮುಳಿದೆ | ತ್ರಿಜಗಪತಿ ಕೇಳಿದೆ ||2|| ಹರಿವಾಸರವ ಬಿಟ್ಟೆ | ದುರುಳರಿಗೆ ಧನ ಕೊಟ್ಟೆ | ಹರಿಭಕ್ತರ ತೊರೆದು ಕೆಟ್ಟೆ | ಹರಿಶ್ರವಣ ಬಚ್ಚಿಟ್ಟೆ | ಪರಮ ವ್ರತವ ಮೆಟ್ಟೆ | ಹರುಷದಲ್ಲಿಗೆ ಮನಮುಟ್ಟಿ | ದುರ ರಸಕೆ ಸುಖ ಬಟ್ಟೆ | ವಿರಕುತಿಯನು ಬಿಟ್ಟೆ | ದುರಿತಕ್ಕೆ ಗುರುತಿಟ್ಟೆ | ಪರಕೆ ಕಾಣೆನೊ ಬಟ್ಟೆ ||3|| ಜ್ಞಾನವೆಂಬೋದೇ ಇಲ್ಲಾ | ಏನು ಪೇಳಲಿ ಸೊಲ್ಲಾ | ನೀನೆಂಬೋದಿಲ್ಲವಲ್ಲಾ | ಹಾನಿ ವೃದ್ದಿಗಳೆಲ್ಲಾ | ನಾನುಂಟೆ ಎಲ್ಲ ಸಲ್ಲಾ | ದಾನಾದೆ ಸತತ ಖುಲ್ಲಾ | ತಾ ನುಡಿಗೆ ಸೋತು ಚಿಲ್ಲಿ | ರಾನಡತಿ ಸಿರಿನಲ್ಲಾ | ನಾ ನಡದೆ ನೀ ಬಲ್ಲಾ | ದೇ ನೋಡು ಪ್ರತಿ ಮಲ್ಲಾ ||4|| ಅಪರಾಧಿ ನಾನಯ್ಯ | ಅಪವಾದದವನಯ್ಯ | ಕೃಪಣದಿಂದೆನ್ನ ಕಾಯಾ | ಉಪಜಯವಾಯಿತು ಪ್ರೀಯಾ | ಸ್ವಪನದಿ ಪುಣ್ಯ ಸಹಾಯಾ | ಲಪಮಾಡಲಿಲ್ಲ ಜೀಯಾ | ಕೃಪೆಯಲ್ಲಿ ಪಿಡಿ ಕೈಯಾ | ವಿಜಯವಿಠ್ಠಲರೇಯಾ | ಗುಪುತವಾದುದುಪಾಯಾ | ತಪಸಿಗಳ ಮನೋಜಯಾ ||5||

Thoughts & Reflections

0

No reflections shared yet. Be the first to share your thoughts!

Share your thought