Bhasaka
← Back to home

ಎಂತು ನಿನ್ನ ಮೆಚ್ಚಿಸುವೆನೊ ಎಲೊ ವೆಂಕಟಾ

Author: ವಿಜಯದಾಸCategory: ಶ್ರೀಕೃಷ್ಣ
ಎಂತು ನಿನ್ನ ಮೆಚ್ಚಿಸುವೆನೊ ಎಲೊ ವೆಂಕಟಾ ಸಂತತ ಬಿಡದೆ ಎನ್ನ ಅಂತರಂಗದಲ್ಲಿ ಇರೊ ಕುಣಿದು ನಿನ್ನ ಮೆಚ್ಚಿಸುವೆನೆ | ಫಣಿಹಾರನೈಯನನ ಜನಕಾ | ಮಣಿದು ನಿನ್ನ ಮೆಚ್ಚಿಸುವೆನೆ | ಸನಕಾದಿಗಳ ಸುಪ್ರೇಮಾ ||1|| ಅನ್ನವಿತ್ತು ಮೆಚ್ಚಿಸುವೆನೆ | ಘನ್ನ ನಿತ್ಯ ತೃಪ್ತ ನೀನು | ಹೆಣ್ಣನಿತ್ತು ಮೆಚ್ಚಿಸುವೆನೆ | ಹೆಣ್ಣುರೂಪ ನೀನೆ ಸ್ವಾಮಿ ||2|| ಅಪ್ಪ ನಿನ್ನ ಮೆಚ್ಚಿಸುವೆನೆ | ದರ್ಪಾಕ ಬೊಮ್ಮನ ತಂದೆ | ಅಪ್ಪ ನಿನ್ನ ಮೆಚ್ಚಿಸುವೆನೆ | ಸುಪ್ಪಾಣಿ ರಮೆಯರಸಾ ||3|| ಪಾಲು ಕುಡಿಸಿ ಮೆಚ್ಚಿಸುವೆನೆ | ಪಾಲಸಾಗರ ಸದನ ನೀನು | ಮಾಲೆ ಹಾಕಿ ಮೆಚ್ಚಿಸುವೆನೆ | ಮಾಲೆ ಕೌಸ್ತಭ ಭೂಷಣಾ||4|| ಸೇವೆ ಮಾಡಿ ಮೆಚ್ಚಿಸುವೆನೆ | ಪಾವಮಾನಿ ತಾತ ನೀನು | ಆವದೊ ಕಾಣೆನೋ ಎನ್ನ ಕಾವುದು ವಿಜಯವಿಠ್ಠಲಾ ||5||

Thoughts & Reflections

0

No reflections shared yet. Be the first to share your thoughts!

Share your thought