Bhasaka
← Back to home

ಎಂತು ನಿಲ್ಲುವೆನು ನಿನ್ನಯ ಬಳಿಯಲ್ಲಿ

Author: ವಿಜಯದಾಸCategory: ಶ್ರೀಕೃಷ್ಣ
ಎಂತು ನಿಲ್ಲುವೆನು ನಿನ್ನಯ ಬಳಿಯಲ್ಲಿ | ಅಂತರಾತ್ಮಕ ಪೇಳು ಎನಗೊಂದು ಹದನಾ ವೇದಶಾಸ್ತ್ರವನು ಅರಿಯೆ | ಪುರಾಣ ಪುಣ್ಯಕಥೆ | ಓದಲಿನ್ನರಿಯೆನೊ ಎಂದೆಂದಿಗೂ | ಭೇದ ಭೇದವನರಿಯೆ | ಬಾಗಿ ನಮಿಸುವದನರಿಯೇ | ಆದರಣಿ ಅರಿಯೆ ಆರಾಧಿನಿಯನರಿಯೆ||1|| ಜ್ಞಾನ ಭಕುತಿಯನರಿಯೆ | ಗಮನ ತೀರ್ಥವನರಿಯೆ | ಧ್ಯಾನವನು ಅರಿಯೆ ದಾಕ್ಷಿಣ್ಯವನು ಅರಿಯೆ | ಮೌನವನು ಅರಿಯೆ ಮಹತಪಸ್ಸು ಮೊದಲೆ ಅರಿಯೆ | ಗಾನವನು ಅರಿಯೆ ಗತಿಮತಿಗಳನು ನಾನರಿಯೆ ||2|| ಭೂತದಯವನು ಅರಿಯೆ | ಬುದ್ಧಿ ಪೂರ್ವಕವರಿಯೆ | ಯಾತರ ಸೇವಿ ಅರಿಯೆ ಏನು ಅರಿಯೆ | ದಾತಾರ ಜಗದೇಕ | ನಾಥ ವಿಜಯವಿಠ್ಠಲ ಪ್ರೀತಿಯಲಿ ನಿನ್ನ ನಾಮವನುಣಿಸಿಕಾಯೊ ||3||

Thoughts & Reflections

0

No reflections shared yet. Be the first to share your thoughts!

Share your thought