Bhasaka
← Back to home

ಎಂತು ಬಿನ್ನೈಸಲೊ ಮುರಾರಿ ಸಾರಿಗೆ

Author: ವಿಜಯದಾಸCategory: ಶ್ರೀಕೃಷ್ಣ
ಎಂತು ಬಿನ್ನೈಸಲೊ ಮುರಾರಿ ಸಾರಿಗೆ ಸಾರಿ | ಸಂತ ಜನರ ಆಧಾರಿ ಶ್ಲೋಕ - ಘನ ಅನವರತ ಕಾಯಾ | ಸ್ವಾಮಿ ಲಕ್ಷ್ಮೀ ಸಹಾಯ | ಅನಿಮಿಷ ಮುನಿಗೇಯಾ ಹೇಯ ಧರ್ಮ ವಿಹಾಯ | ಅನಘ ನಗರ ನಿಲಯಾ | ಅಮಿತ ಆನಂದ ಕಾಯಾ | ನೆನಹಿ ಪಾಲಿಸೋ ಜೀಯಾ | ನಾಗ ತಲ್ಪೋರು ಗಾಯಾ ||1|| ಪದ - ಶರಣು ಶರಣು ಶಾರಣ್ಯನೆ | ಗುಣ ಗುಣ್ಯನೆ | ನಮಗಾನನ್ಯನೆ | ನಿರುತರಂತರ ಕಾರುಣ್ಯನೆ ಪ್ರದದಾನ್ಯನೆ | ಅಪ್ರತಿ ಧನ್ಯನೆ | ಪರಮ ಪುರುಷ ಅಸಮಾನ್ಯನೆ | ಮಹ ಪುಣ್ಯನೆ | ಪ್ರಳಯ ಕನ್ಯೆನೆ | ಕರುಣ ಸಾಕ್ಷಿಗನೆ ಲಾವಣ್ಯನೆ | ಅನುಗಣ್ಯನೆ ಪ್ರಾಕೃತ ಶೂನ್ಯನೆ ||2|| ಶ್ಲೋಕ - ಪರಿಪರಿ ಹೇಯ ಗಾತ್ರಾ ತೆತ್ತನೊ ಇಷ್ಟ ಮಾತ್ರಾ | ಚರಿಸಿದೆ ವಿಷಯ ಯಾತ್ರಾ | ಪಾರಗಾಣೆನೋ ಮಿತ್ರಾ | ಕೊರಳಿಗೆ ಮಮತೆ ಸೂತ್ರಾ | ಉರುಲು ಬಿದ್ದಿದೆ ಚಿತ್ರಾ | ಸುರಕು ಬಡಿಪ ತನುತ್ತಾ | ಆವನೋ ಕಮಲ ನಿನೇತ್ರಾ | ||3|| ಪದ - ನರಕ ನರಕ ಉಂಡು ಬೆಂದೆನೊ | ಇಲ್ಲಿ ನಿಂದೆನೊ | ಗತಿಗೆ ಮುಂದೇನೊ | ಕುರುಡ ಕಿವುಡನಾಗಿ ನೊಂದೆನೊ | ಇನ್ನೊಂದೇನೊ | ಉಪಾಯವಂದೆನೊ | ಮರಹು ಸಾಗರದೊಳು ಸಂದೆನೊ | ಅಂದು ಹಿಂದೆನೊ | ಸುಜನರಿಗಂದೇನೊ ||4|| ಶ್ಲೋಕ - ಸುಲಲಿತ ರುಚಿರಪಾಂಗಾ | ಶುದ್ದ ಸ್ವಭಾವ ರಂಗಾ | ಪಲಿಪರಮಾಣು ಸಂಗಾ | ಪಾವನ ಕೋಮಲಾಂಗಾ | ವೊಲಿಸಿದವರ ಭಂಗಾ | ಪರಿಸುವ ಶಿಂಗ ಶಿಂಗಾ | ವರಬಲಗುಣ ತರಂಗಾ | ಸರಸಿಜ ಹೃತ್ಪುಂಗಾ ||5|| ಪದ - ಚಿಂತಿಸುವೆನೊ ನಿನ್ನ ವಿಗ್ರಹಾ | ಮನೋನಿಗ್ರಹಾ | ವಾಗಲಿ ಅನುಗ್ರಹಾ | ಸಂತತ ಎನಗಿದೆ ಸಂಗ್ರಹಾ | ದೇಹವೈಗ್ರಹಾ | ದುರುಳರ ಪ್ರತಿ ಗ್ರಹಾ | ಮುಂತೆ ಕೈಕೊಂಬ ದುರಾಗ್ರಹಾ | ಯೈವ ವಿಗ್ರಹಾ | ಮಾಣಿಸು ಶಿರಿಗ್ರಹಾ | ಸಂತೈಸು ಕರುಣವಾರುಣಗ ಅನಿಗ್ರಹಾ ||6|| ಶ್ಲೋಕ - ನವನೀತ ಚೋರಾ ಗೋಪಿ ವಸ್ತ್ರಾಪಹಾರಾ | ಲವ ಲವ ಕಾಲ ಧಾರಾ | ಕಂಸದಾನವ ಸಂಹಾರಾ | ಧ್ರುವ ಬಲಿಕರಿ ಉದ್ಧಾರಾ | ನಾನವತಾರ ಧೀರಾ | ಪವನ ಮನಮಂದಿರಾ ಪಾಲಿಸೊ ವಾರಂ ವಾರ||7|| ಪದ - ವಿಜಯನಗರಾಧೀಶ ಸರ್ವೇಶಾ | ಮಣಿಮಯ ಭೂಷಾ | ಸೂರ್ಯ ಕೋಟಿ ಪ್ರಕಾಶಾ | ತ್ರಿಜಗದೊಳಗೆ ನೀನೆ ನಿರ್ದೋಷಾ | ಶಕ್ತಿ ವಿಶೇಷಾ | ಐಶ್ವರ್ಯ ವಿಲಾಸಾ | ಋಜುಜ್ಞಾನ ಕೊಡುವದೊ ಮನೋತ್ತರಿಸಾ | ಮಂಜುಳ ಭಾಷಾ | ಭೂದಾ ರಜವಾಸಾ | ವಿಜಯವಿಠ್ಠಲ ನಿರ್ಜರ ಕೋಶಾ | ಹೃದಯ ಕಾಶಾ | ನಾಮಕ ಮಹಿದಾಸಾ ||8||

Thoughts & Reflections

0

No reflections shared yet. Be the first to share your thoughts!

Share your thought