Bhasaka
← Back to home

ಎಂತು ಮರುಳಾದೆ ನೀ ಯದಿಯ

Author: ವಿಜಯದಾಸCategory: ಶ್ರೀಕೃಷ್ಣ
ಎಂತು ಮರುಳಾದೆ ನೀ ಯದಿಯ ಬಿಗುವಿನಲಿ ತಿರುಗಿ | ಪಂಥದಲ್ಲಿ ಕೆಡಲಿಬೇಡ ಎರಡು ದಿನ | ಸಂತೆ ನೆರೆದಂತೆ ಮೂಢ ಇಪ್ಪದಿದು | ಸಂತತ ತೊರೆದು ಬಾಡೊ ಪ್ರಾಣಿ ಪ್ರಾಣಿ ವಿಂಚುಗೂಳನು ತಿಂದು ಮನೆ ಮನೆಗಳು ತಿರುಗಿ | ಸಂಚಿತಾರ್ಥವ ತಿಳಿಯದೆ ಮರುಳಾದ | ಪಂಚೇಂದ್ರಿಯಂಗಳನು ಅಳಿಯದೆ | ಬಂದ ಪರ | ಪಂಚವನು ನೀ ಕಳಿಯದೆ ವ್ಯರ್ಥಾಯ | ವಂಚನಿಂದಲಿ ನಡೆದು ಬಾಯಿ ತೆರೆದು | ಹಲ್ಲನು | ಹಂಚಿಕೆ ತೋರಿದಂತೆ ಮೃತ್ಯುವಿನ | ಪಂಚದಲಿ ಸೇರಿದಂತೆ | ಆಗುವುದು | ಕಂಚು ಕೆಳಗೆ ಬಿದ್ದಂತೆ ಪ್ರಾಣಿ ||1|| ನುಗ್ಗು ನುಸಿಯಾಗದಿರು | ನೂಕು ನಿನ್ನಹಂಕಾರ | ಹಿಗ್ಗದಿರು ಈ ಬದುಕಿಗೆ ಎಂದಿಗೂ | ಕುಗ್ಗದಿರು ಈ ಮಲಕಿಗೆ ವೊಳಗಾಗಿ | ಮುಗ್ಗದಿರು ಈ ಬಲಕಿಗೆ ಸ್ಥಿರವಾಗಿ | ಬಗ್ಗು ನಡೆವಳಿ ನಡೆದು | ವೆಗ್ಗಳದ ನಡೆವಳಿ ನಡೆದು | ವೆಗ್ಗಳದ ಧರ್ಮದಾ ಸುಗ್ಗಿಯಲಿ ದಿನವ ಹಾಕೊ | ಬಿಡು ಬಿಡು ಅಗ್ಗಳಿಕೆತನವೆ | ಸಾಕು ಆವಾಗ ತೆಗ್ಗಿಕೊಂಡಿರಲಿ ಬೇಕು | ಪ್ರಾಣಿ ||2|| ಇನ್ನಾದರೂ ಕೇಳು | ಪುಣ್ಯವಂತರ ಕೂಡು | ನಿನ್ನವರು ನಿನಗೆ ದಾರೊ | ಕಣ್ಣಾಗೆ ಎಣ್ಣೆ ಬಿದ್ದಂತೆ ಸಾರೊ ಬಾಯಿಂದ | ಬೆನ್ನಿಗೆ ಬಂದ ವಿಚಾರೊ ತುದಿಯಲಿ | ಮಣ್ಣು ಮಣ್ಣನೆ ಕಲಿತು ಹೋಗುವುದು ನಿಶ್ಚಯವು | ಚೆನ್ನಾಗಿ ಎಚ್ಚೆತ್ತುಕೋ ಈ ಮಾತಿಗೆ | ಖಿನ್ನನಾಗುವದೇತಕೊ ಸಾವಿರಕು | ಮುನ್ನಿಲ್ಲವೊ ಮನಸಿತೊ ಪ್ರಾಣಿ ||3|| ವೇದಶಾಸ್ತ್ರವನರಿಯೆ ಆದಿಪುರಾಣಗಳು | ಓದುಬರವೆಂದನ್ನದಿರೂ ಅದ್ವೈತ | ವಾದವರ ಕೂಡದಿರು ಇದೆ ಮಿಗಿ ಲಾದರು ಮರಿಯದಿರು ಉತ್ತಮ | ಸಾಧನಗತಿಗೆ ಸಿರಿ ವಿಜಯವಿಠ್ಠಲನ ಶ್ರೀ | ಪಾದವನು ಒಂದೇ ಭಕ್ತಿಯಿಂದಲಾ | ರಾಧಿಸು ಇದಕೆ ಯುಕ್ತಿ ಕಡಿಯದಲೆ | ಮಾಧವನು ಕೊಡುವ ಮುಕ್ತಿ ಪ್ರಾಣಿ||4||

Thoughts & Reflections

0

No reflections shared yet. Be the first to share your thoughts!

Share your thought