Bhasaka
← Back to home

ಎಂತು ವರ್ಣಿಪೆ ನಮ್ಮಮ್ಮಾ

Author: ವಿಜಯದಾಸCategory: ಶ್ರೀಹನುಮಂತ
ಎಂತು ವರ್ಣಿಪೆ ನಮ್ಮಮ್ಮಾ | ಯಂತ್ರೋದ್ಧಾರಕನಾಗಿ ಮೆರೆವನಾ ಕೋತಿ ರೂಪದಲಿ ಬಂದು | ಭೂತಳಕೆ ಬೆಡಗು ತೋರಿ || ಈ ತುಂಗಭದ್ರೆಯಲ್ಲಿ | ಖ್ಯಾತಿಯಾಗಿಪ್ಪ ಯತಿಯಾ||1|| ಸುತ್ತಲು ವಾನರ ಬದ್ಧ | ಮತ್ತೆ ವಲಯಾಕಾರ ಮಧ್ಯ || ಚಿತ್ರಕೋಣ ಅದರೊಳು | ನಿತ್ಯದಲಿಯಿಪ್ಪ ಯತಿಯಾ ||2|| ವ್ಯಾಸ ಮುನಿರಾಯರಿಂದ | ಈ ಶಿಲೆಯೊಳಗೆ ನಿಂದು || ಶ್ರೀಶ ವಿಜಯವಿಠ್ಠಲನ್ನ | ಏಸು ಬಗೆ ತುತಿಪನ್ನ ||3||

Thoughts & Reflections

0

No reflections shared yet. Be the first to share your thoughts!

Share your thought