Bhasaka
← Back to home

ಎಂದು ನೋಡುವೆ ಎನ್ನ ಗುರುವಿನಾ

Author: ವಿಜಯದಾಸCategory: ಶ್ರೀಕೃಷ್ಣ
ಎಂದು ನೋಡುವೆ ಎನ್ನ ಗುರುವಿನಾ | ನಿಂದು ನಂದಿಗಮನನಾ ಎಂದೆಂದಿಗೆ ಪೊಂದಿದವರಿಗಾ | ನಂದ ಕೊಡುವ ಇಂದು ಮೌಳಿಯ ತ್ರಿಗುಣ ರೂಪನ ತ್ರಿಭುವನೇಶನ | ಜಗತಿಧರ ವಿಭೂಷನ || ನಿಗಮವಂದ್ಯ ನೀಲಕಂಠನ ನಗವತಿ ಸುತಿಪತಿಯ ರುದ್ರನ ||1|| ತಪೋಧನೇಶನ ತಪ ಪ್ರತಾಪನ | ತಪನ ಶಶಿ ಅಗ್ನಿನೇತ್ರನ | ಕುಪಿತ ರಹಿತ ಕುಜನ ಮಥನನ | ಅಪರಮಿತ ಗುಣ ವನದಿ ಶಿವನ ||2|| ವಿಮಲಗಾತ್ರನ ವಿಶ್ವಪಾಲನ | ರಮೆಯರಸ ಪದಿಧಾರನ || ಶಮಜಿತನನ ಸುಜನ ರನ್ನನ | ನಮಿಸುವರ ಮನೋವಾಸ ಈಶನ ||3|| ಅಂಧಹರಣನ ಅರ್ಧವೇಷನ | ಮಂದಮತಿ ವಿದುರನ | ಬಂಧು ಬಳಗನ ಬಹು ಉದ್ದಂಡನ | ಅಂಧ ಏಕೇಶವರ್ನ ವದನನ ||4|| ತತುವನಾಥನ ತುಂಗ ವರದನ | ಸತತ ವೈರಾಗ್ಯ ಭಾಗ್ಯನ || ಪತಿತ ಪಾವನ ವಿಜಯ ವಿಠ್ಠಲನ್ನ | ತುತಿಪ ಅವಿಮುಕ್ತಿ | ಪತಿ ವಿಶ್ವೇಶನ ||5||

Thoughts & Reflections

0

No reflections shared yet. Be the first to share your thoughts!

Share your thought